• Slide
    Slide
    Slide
    previous arrow
    next arrow
  • ಬಿಎಸ್ಸಿ ಫಲಿತಾಂಶ: ಬಂಗೂರನಗರ ಪದವಿ ಮಹಾವಿದ್ಯಾಲಯದ ಸಾಧನೆ

    300x250 AD

    ದಾಂಡೇಲಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್ಸಿ 5ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ಬಂಗೂರನಗರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ.

    ಅಕ್ಷತಾ ಉಮ್ಮಡಿ, ಎನ್.ಯು. ಸಹನಾ ಹಾಗೂ ವರ್ಷಾ ಕೇರಕರ ಇವರು ಗಣಿತ ಶಾಸ್ತ್ರ ವಿಷಯದಲ್ಲಿ 150 ಕ್ಕೆ 150 ಅಂಕ ತೆಗೆದುಕೊಂಡಿದ್ದಾರೆ ಹಾಗೆಯೇ ಎಸ್.ಇ.ಸಿ. ಗಣಿತಶಾಸ್ತ್ರ ಪತ್ರಿಕೆಯಲ್ಲಿಯೂ ಕೂಡ ಅಕ್ಷತಾ ಉಮ್ಮಡಿ ಹಾಗೂ ಭೌತಶಾಸ್ತ್ರದಲ್ಲಿ ಎನ್.ಯು. ಸಹನಾ ಇವರು 100 ಕ್ಕೆ 100 ಅಂಕ ತೆಗೆದುಕೊಂಡಿದ್ದಾರೆ. ಅಕ್ಷತಾ ಉಮ್ಮಡಿ ಇವರು ಬಿ.ಎಸ್ಸಿ. ಪ್ರಥಮ ವರ್ಷದಿಂದ ಗಣಿತಶಾಸ್ತ್ರದಲ್ಲಿ 150 ಕ್ಕೆ 150 ಅಂಕಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದಾರೆ.

    300x250 AD

    ಹಾಗೆಯೇ ಬಿಎಸ್ಸಿ. ಅಂತಿಮ ವರ್ಷದ 5 ನೇ ಸೆಮಿಸ್ಟರ್ ಫಲಿತಾಂಶದಲ್ಲಿ ಸಹನಾ ಇಳಿಗೇರ-95.00%, ಅಲಾಸಿಯಾ ಡಿಸೋಜಾ-93.63% ಹಾಗೂ ಎನ್.ಯು. ಸಹನಾ-93.27% ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಒಟ್ಟರೆಯಾಗಿ ಸಿ.ಬಿ.ಝಡ್ ವಿಷಯದಲ್ಲಿ ಶೇ.100 ರಷ್ಟು ಫಲಿತಾಂಶ ಮತ್ತು ಪಿ.ಸಿ.ಎಮ್ ವಿಷಯದಲ್ಲಿ ಶೇ. 88% ರಷ್ಟು ಫಲಿತಾಂಶ ಬಂದಿರುತ್ತದೆ. ಇವರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಲ್. ಗುಂಡೂರ, ಕಾಲೇಜಿನ ಆಡಳಿತ ಮಂಡಳಿಯವರು, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ತೇಲಿ, ಬೋಧಕ ಹಾಗೂ ಬೋಧಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top