ಸಿದ್ದಾಪುರ: ಪ್ರಜಾಪ್ರಭುತ್ವ ವಿಶ್ವದ ಶ್ರೇಷ್ಟ ವ್ಯವಸ್ಥೆ, ಅದು ನಮ್ಮ ಹೆಮ್ಮೆ. ಶಾಸಕನಾಗಿ ನಾನು ನಿಮ್ಮ ಮುಂದೆ ಬಂದು ನಿಲ್ಲಬೇಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕಾರಣ. ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶ ಅನುಭವಿಸಿದ ನೋವು, ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ದೌರ್ಜನ್ಯವನ್ನು ನಾವು ಇತಿಹಾಸದಿಂದ ತಿಳಿದಿದ್ದೇವೆ. ಸಂವಿಧಾನವೂ ಸಮಾಜದ ಎಲ್ಲ ವರ್ಗದ ಕಟ್ಟ ಕಡೆಯ ಮನುಷ್ಯನಿಗೆ ನ್ಯಾಯ ಒದಗಿಸುತ್ತದೆ.ಪ್ರಜಾಪ್ರಭುತ್ವದ ಅಡಿಯಲ್ಲಿ ಗ್ರಾಮ ಪಂಚಾಯತ್ದಿಂದ ಹಿಡಿದು, ಪ್ರಧಾನ ಮಂತ್ರಿಯವರೆಗೆ ಎಲ್ಲಾ ಸಮಾಜದ ಸಾಮಾನ್ಯ ಮನುಷ್ಯನೊಬ್ಬ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ ಹೇಳೀದರು.
ತಾಲೂಕಿನ ಅವರಗುಪ್ಪದಲ್ಲಿ ಸ್ಥಳೀಯ ಎಂ.ಜಿ.ಸಿ. ಕಲಾ, ವಾಣಿಜ್ಯ ಮತ್ತು ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯ ಸಿದ್ದಾಪುರದ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಜಾಪ್ರಭುತ್ವ ಮತ್ತು ಯುವಜನತೆ ಎನ್ನುವ ವಿಷಯದ ಕುರಿತು ಮಾತನಾಡಿದರು.ಯುವಜನತೆಯಿಂದ ಪ್ರಜಾಪ್ರಭುತ್ವದ ಅಡಿಪಾಯ ಅಲುಗಾಡದ ಹಾಗೆ ಮಾಡಬೇಕಾಗಿದೆ. ವ್ಯವಸ್ಥೆಯನ್ನು ಬಲಬಡಿಸಬೇಕು. ನಿಮಗೆಲ್ಲ ಆತ್ಮಸ್ಥೈರ್ಯ ಸಿಗಲು ಇಂತಹ ಎನ್.ಎಸ್.ಎಸ್.ಶಿಬಿರದ ಅವಶ್ಯಕತೆ ಇದೆ. ಶಿಸ್ತು, ಕರ್ತವ್ಯ, ಸಮಯದ ಪಾಲನೆ, ಸ್ವಚ್ಛತೆ, ಎನ್.ಎಸ್.ಎಸ್. ಶಿಬಿರದ ಉದ್ದೇಶದ ಈಡೇರಿಸುವಿಕೆ, ತ್ಯಾಗದ ಮನೋಭಾವ ನಿಮ್ಮಲ್ಲಿ ಮೂಡಲಿ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಜಯಂತಿ ಶಾನಭಾಗ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಬಾಲಕೃಷ್ಣ ಐ. ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಎ.ಆರ್. ತಿಲಕಕುಮಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸತೀಶ್ ಗೌಡರ್, ಗ್ರಾಮ ಕಮಿಟಿ ಅವರಗುಪ್ಪಾದ ಅಧ್ಯಕ್ಷರಾದ ಮೋಹನ ಎಂ. ನಾಯ್ಕ, ಅವರಗುಪ್ಪಾದ ನಾಟಿ ಪಶು ವೈದ್ಯರಾದ ರೇವಣ್ಣ ನಾಯ್ಕ, ಸ.ಹಿ.ಪ್ರಾಥಮಿಕ ಶಾಲೆ ಅವರಗುಪ್ಪಾದ ಮುಖ್ಯೋಪಾಧ್ಯಾಯಿನಿಯಾದ ಪ್ರತಿಭಾ ನಿಲೇಕಣಿಯವರು ಉಪಸ್ಥಿತರಿದ್ದರು.
ಎನ್.ಎಸ್. ಎಸ್. ಯೋಜನಾಧಿಕಾರಿಯಾದ ಡಾ. ದೇವನಾಂಪ್ರಿಯ ಎಂ.ರವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಶ್ರೀಯುತ ಭೀಮಣ್ಣ ನಾಯ್ಕರವರಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಕು. ಆಶಿತಾ ಗೌಡರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು. ಪ್ರಗತಿ ಕೆ.ಯು. ಮತ್ತು ಸಂಗಡಿಗರು ಎನ್.ಎಸ್.ಎಸ್.ಗೀತೆ ಹಾಡಿದರು. ಕು. ಸಾಯಿಕುಮಾರ ನಾಯ್ಕ ವಂದಿಸಿದರು. ಕು. ಸುಷ್ಮಾ ಮತ್ತು ಕು. ಆಶಿತಾ ಗೌಡರ್ ನಿರೂಪಿಸಿದರು.