Slide
Slide
Slide
previous arrow
next arrow

ಉಚಿತ ಪ್ರಯಾಣ ಶೈಕ್ಷಣಿಕ ಕ್ಷೇತ್ರ ಬಲಗೊಳಿಸಲಿ: ವೀರೇಶ

300x250 AD

ಕಾರವಾರ: ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಜವಾಬ್ದಾರಿಯೊಂದಿಗೆ ಬಳಸೋಣ, ಅದೇ ವೇಳೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ ಎಂದು ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತದೆ. ಅದೇ ವೇಳೆ ಸರಕಾರ ಕೂಡಲೇ ಖಾಲಿ ಇರುವ ಎಲ್ಲ ಕಡೆ ಖಾಯಂ ಶಿಕ್ಷಕರನ್ನು ನೇಮಿಸಲು ಮತ್ತು ಮುಚ್ಚಿರುವ ಶಾಲೆ ಪುನರಾರಂಭಿಸಲು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ತಾಲೂಕು ಸಮಿತಿ ಸರ್ಕಾರಕ್ಕೆ ವಿನಂತಿಸಿದೆ.

ಉಚಿತ ಪ್ರಯಾಣ ಯೊಜನೆಯೇ ಹಲವಾರು ಜನರ ಬದುಕಿಗೆ ಆಸರೆಯಾಗಲಿದೆ. ಬಡಜನತೆಯ ಹೋರಾಟ ಹಾಗೂ ಕನಸಿನ ಫಲ ಇದು. ಬಡ ಅಜ್ಜಿಯು ಬಸ್ಸಿಗೆ ನಮಿಸುವ ಮೂಲಕ ಪ್ರಯಾಣ ಆರಂಭಿಸಿದ್ದು ಮನ ಕಲಕುವಂತಿತ್ತು. ಹಾಗಾಗಿ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವವರು ರಾಜ್ಯದ ಬಹುತೇಕ ಬಡ ಜನಸಾಮಾನ್ಯರೇ ಆಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಜನ ಕೃತಜ್ಞತೆ ಸಲ್ಲಿಸಿದ್ದಾರೆ ಎಂದಿದೆ.

300x250 AD

ನಮ್ಮ ಕರುನಾಡಿನಲ್ಲಿ ಎಲ್ಲರೂ ಹಬ್ಬ ಹರಿದಿನ ಮಾಡುವ ಹಾಗೇ ಸರ್ಕಾರಿ ಶಾಲೆಗಳನ್ನೂ ಸಂಭ್ರಮಿಸಲಿ. ನಮ್ಮ ಕರುನಾಡಿನಲ್ಲಿ ಸರ್ಕಾರಿ ಶಾಲೆಗಳು ಕೂಡ ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿವೆ. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರಕಾರಿ ಶಾಲೆಗಳು ಹಬ್ಬದ ವಾತಾವರಣದಂತೆ ಹಬ್ಬಲಿ. ಉಚಿತ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣ ನಿಮ್ಮ ಮಕ್ಕಳಿಗೆ ನೀಡುತ್ತದೆ. ಸರ್ಕಾರಿ ಶಾಲೆಯ ಮಾಸ್ತರಗಳು ಗುರು-ಗುರುಮಾತೆಯರು ಕೂಡ ಖುಷಿಯಿಂದ ನಿಮ್ಮ ಮುದ್ದು ಮಕ್ಕಳಿಗೆ ಭಿನ್ನಬೇಧವಿಲ್ಲದೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದಾರೆ. ಮಕ್ಕಳಿಗೆ ಪಠ್ಯಪುಸ್ತಕ ಸಮವಸ್ತ್ರ ಕೂಡ ಉಚಿತವಾಗಿ ಸರ್ಕಾರ ನೀಡುತ್ತದೆ. ಹಾಗಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿಕೊಡಿ, ಸರ್ಕಾರಿ ಶಾಲೆ ಬಲವರ್ಧನೆ ಆಗಲಿ. ಮುಚ್ಚಿರುವ ಎಲ್ಲಾ ಶಾಲೆಗಳನ್ನು ಪುನರಾರಂಭಿಸಿ. ಖಾಯಂ ಶಿಕ್ಷಕರನ್ನು ನೇಮಿಸಿ. ಈಗಿರುವ ಅತಿಥಿ ಶಿಕ್ಷಕರನ್ನು ಖಾಯಂ ಮಾಡಿ ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ಎಸ್.ಎಫ್.ಐ ತಾಲೂಕು ಸಮಿತಿಯ ವೀರೇಶ ರಾಠೋಡ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top