ಮುಂಡಗೋಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರಕುಮಾರ ಕಂಡು ತಾಲೂಕಿನ ವಿವಿಧಡೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಳಗಿ ಗ್ರಾಮದಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿ ಕೂಲಿಕಾರರ ಆರೋಗ್ಯ ತಪಾಸಣೆ ಮತ್ತು ಅಸಂಕ್ರಾಮಿಕ ರೋಗಗಳ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿನೀಡಿ ಪರಿಶೀಲನೆ ಮಾಡಿದರು. ನಾಗನೂರ ಪಂಚಾಯತ್ ಸಂಜಿವಿನಿ ಒಕ್ಕೂಟದ ವತಿಯಿಂದ ನರೇಗಾ ಒಗ್ಗೂಡಿಸುವಿಕೆಯಡಿ ನಿರ್ಮಿಸುತ್ತಿರುವ ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕ ಆಸ್ಪತ್ರೆಗೆ ಭೇಟಿನೀಡಿ ಅಲ್ಲಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ತಾಲೂಕ ಆಸ್ಪತ್ರೆಗೆ ತಜ್ಞವೈದ್ಯರ ಕೊರತೆ ನಿಗಿಸುವುದಕ್ಕೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ವೈದ್ಯರ ಕೊರತೆ ನಿಗಿಸುವ ಕ್ರಮಕೈಗೊಳ್ಳಲಾಗುವುದು ಎಂದರು. ಎನ್‌ಎಚ್‌ಮ್ ದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇತನ 3 ತಿಂಗಳಿ0ದಲೂ ಬಂದಿಲ್ಲಾ ಎಂಬುದನ್ನು ಅವರ ಗಮನಕ್ಕೆ ತರಲಾಯಿತು.
ನಂತರ ಕೊಪ್ಪ ಗ್ರಾಮದ ಅನ್ನಪೂರ್ಣ ಬೆಣ್ಣಿಯವರ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದು ಅಡಿಕೆ ಹಾಳೆಯಿಂದ ಊಟದ ಪ್ಲೇಟ್ ತಯಾರಿಸುವ ಘಟಕ ಹಾಗೂ ಪಪ್ಪಾಯಿ ತೋಟವನ್ನು ವಿಕ್ಷಿಸಿದರು. ಕೊಪ್ಪ ಗ್ರಾಮದ ಸ್ಮಾರ್ಟ ಅಂಗನವಾಡಿಗೆ ಚಾಲನೆ ನೀಡಿದರು. ನಂತರ ನಂದಿಗಟ್ಟಾ ಪಂಚಾಯತ್ ವ್ಯಾಪ್ತಿಯ ಬಸನಾಳ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜೆಜೆಎಮ್‌ಕಾಮಗಾರಿ ವಿಕ್ಷಣೆ ಮಾಡಿ ಕಾರವಾರಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಇಒ ಪ್ರವೀಣ ಕಟ್ಟಿ, ಎ.ಡಿ. ವಾಯ್.ಟಿ. ದಾಸನಕೊಪ್ಪ, ಎಇ ಪ್ರದೀಪ ಭಟ್ಟ, ಡಾ. ನರೇಂದ್ರಕುಮಾರ, ಡಾ. ಶಿವಕುಮಾರ, ಡಾ. ಅಬೇದಹುಸೇನ, ಆಯಾ ಪಂಚಾಯತ್‌ಗಳ ಅಧ್ಯಕ್ಷರು, ಪಿಡಿಒಗಳು ಇದ್ದರು.