ಹೊನ್ನಾವರ: ತಾಲೂಕಿನ 26 ಗ್ರಾಮ ಪಂಚಾಯತಿಗೆ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಕರ್ಕಿ ಹವ್ಯಕ ಸಭಾಭವನದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಅಧ್ಯಕ್ಷತೆಯಲ್ಲಿ ಮೀಸಲಾತಿ ಪ್ರಕಟಗೊಂಡಿತು.
ಹಳದೀಪುರ ಅಧ್ಯಕ್ಷ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕರ್ಕಿ ಅಧ್ಯಕ್ಷ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಚಂದಾವರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಬ ಮಹಿಳೆ, ನವಿಲಗೋಣ ಅಧ್ಯಕ್ಷ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕಡತೋಕಾ ಅಧ್ಯಕ್ಷ ಸಾಮನ್ಯ ಮಹಿಳೆ, ಉಪಾಧ್ಯಕ್ಷ ಅ ವರ್ಗ, ಕಡ್ಲೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ, ಸಾಲ್ಕೋಡ್ ಅಧ್ಯಕ್ಷ ಬ ಮಹಿಳೆ, ಉಪಾಧ್ಯಕ್ಷ ಅ ವರ್ಗ, ಹೊಸಾಕುಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮುಗ್ವಾ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಅ ಮಹಿಳೆ, ಹಡಿನಬಾಳ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಅ ಮಹಿಳೆ, ಚಿಕ್ಕನಕೋಡ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಬ ವರ್ಗ, ಖರ್ವಾ ಅಧ್ಯಕ್ಷ ಅ ವರ್ಗ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಜಲವಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮನ್ಯ ಮಹಿಳೆ, ಹೆರಂಗಡಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಾವಿನಕುರ್ವಾ ಅಧ್ಯಕ್ಷ ಬ ವರ್ಗ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಉಪ್ಪೋಣಿ ಅಧ್ಯಕ್ಷ ಅ ವರ್ಗ, ಉಪಾಧ್ಯಕ್ಷ ಪರಿಶಿಷ್ಠ ಜಾತಿ ಮಹಿಳೆ, ನಗರಬಸ್ತಿಕೇರಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಮಾಗೋಡ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಕುದ್ರಗಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಬಳ್ಕೂರ್ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಅ ವರ್ಗ ಮಹಿಳೆ, ಕೊಡಾಣಿ ಅಧ್ಯಕ್ಷ ಅ ವರ್ಗ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಮೇಲಿನ ಇಡಗುಂಜಿ ಅಧ್ಯಕ್ಷ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕೆಳಗಿನೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಅ ವರ್ಗ, ಕಾಸರಕೋಡ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಮಹಿಳೆ, ಜನಪ್ರತಿನಿಧಿಗಳು ಆಯ್ಕೆಯಾಗದ ಮಂಕಿ ಬಿ. ಅನಂತವಾಡಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಮಂಕಿ ಸಿ ಚಿತ್ತಾರ ಅಧ್ಯಕ್ಷ ಸಾಮನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ.
ಆಯ್ಕೆ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್, ತಹಶೀಲ್ದಾರ ರವಿರಾಜ ದಿಕ್ಷೀತ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.