Slide
Slide
Slide
previous arrow
next arrow

ಭಾರತೀಯ ಸೇನೆ ಸೇರಲು ಹೊರಟ ಅಂಕೋಲಾದ 17 ನಾಯಿಮರಿಗಳು

300x250 AD

ಅಂಕೋಲಾ: ತಾಲೂಕಿನ ಭಾವಿಕೇರಿಯ ರಾಘವೇಂದ್ರ ಭಟ್ ಸಾಕಿದ ವಿಶೇಷ ತಳಿಯ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು 17 ನಾಯಿ ಮರಿಗಳನ್ನು ಕೊಂಡೊಯ್ದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಭಾವಿಕೇರಿಯ ರಾಘವೇಂದ್ರ ಭಟ್ಟರಿಗೆ ನಾಯಿಗಳನ್ನು ಸಾಕುವುದರಲ್ಲಿ ಅಪಾರ ಆಸಕ್ತಿಯಿದ್ದು ಕಳೆದ ಸುಮಾರು 25 ವರ್ಷಗಳಿಂದ ವಿವಿಧ ತಳಿಯ ಹಲವಾರು ನಾಯಿಗಳನ್ನು ಸಾಕಿ ಸಲುಹಿದ್ದು ಇವರು ಸಾಕಿರುವ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿಗಳು ರಕ್ಷಣಾ ಇಲಾಖೆಯ ಕಾರ್ಯಗಳಿಗೆ ಸೂಕ್ತವಾದ ದೇಹ ಮತ್ತು ಬುದ್ಧಿಮತಿಯನ್ನು ಹೊಂದಿರುವುದರಿಂದ ಸೇನೆಯ ಅಧಿಕಾರಿಗಳು 17 ನಾಯಿ ಮರಿಗಳನ್ನು ಅವರಿಂದ ಪಡೆದು ಆಸ್ಸಾಂನ ಸೇನಾ ತರಬೇತಿ ಕೇಂದ್ರಕ್ಕೆ ಸಾಗಿಸಿದ್ದು ಇನ್ನು ಮುಂದೆ ಭಾರತೀಯ ಸೇನೆಯ ವಿಶೇಷ ಪಾಲನೆಯಲ್ಲಿ ಈ ನಾಯಿ ಮರಿಗಳು ಬೆಳೆಯಲಿವೆ ಮತ್ತು ತರಬೇತಿ ಪಡೆಯಲಿವೆ.

ರಾಘವೇಂದ್ರ ಭಟ್ಟರಿಂದ ಕೊಂಡೊಯ್ದ ಇದೇ ತಳಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ರಾಘವೇಂದ್ರ ಭಟ್ಟರ ಕುರಿತು ಮಾಹಿತಿ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ನಾಯಿ ಮರಿಗಳ ಕುರಿತು ಆಸಕ್ತಿ ತೋರಿದ್ದಾರೆ.

ವಿಶೇಷ ಹವಾ ನಿಯಂತ್ರಿತ ಬಸ್ಸಿನಲ್ಲಿ ನಾಯಿಮರಿಗಳನ್ನು ಆಸ್ಸಾಂಗೆ ಸಾಗಿಸಲಾಗಿದ್ದು, ನಾಯಿ ಮರಿಗಳ ಕುರಿತು ಅಧ್ಯಯನ ನಡೆಸಲು ಸೇನೆಯ ಜವಾನರೋರ್ವರು 45 ದಿನಗಳ ಕಾಲ ಭಾವಿಕೇರಿಯಲ್ಲಿ ವಾಸವಾಗಿದ್ದು ಮರಿಗಳ ಚಲನವಲನ,ಆಹಾರ ಪದ್ಧತಿ, ಬುದ್ಧಿಮತಿ, ಆರೋಗ್ಯ ಮೊದಲಾದ ಮಾಹಿತಿಗಳ ವರದಿಯನ್ನು ಪ್ರತಿದಿನ ಹಿರಿಯ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದರು.

ನಮ್ಮ ನಾಯಿ ಮರಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಹೊರಟಿರುವುದು ಹೆಮ್ಮೆ ಮತ್ತು ಸಂತಸ ತಂದಿದೆ.ಬೆಲ್ಲಿಯಂ ಮೆಲಿನೋಯ್ಸ್ ತಳಿಯ ನಾಯಿಗಳು ತಮ್ಮ ಕಾರ್ಯಕ್ಷಮತೆಯಿಂದ ಸೇನೆಯಲ್ಲಿ ಮಿಂಚಲಿವೆ ಎಂದು ಶ್ವಾನಪ್ರೇಮಿ ರಾಘವೇಂದ್ರ ಭಟ್ಟ ಭಾವಿಕೇರಿ ಹೇಳಿದ್ದಾರೆ.

300x250 AD

Share This
300x250 AD
300x250 AD
300x250 AD
Back to top