ಶಿರಸಿ : ಪ್ರಸಕ್ತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಗಣೇಶನಗರ ಶಾಲೆಯ ಓರ್ವ ವಿದ್ಯಾರ್ಥಿಯ ರಿಸಲ್ಟ್ ಮರುಮೌಲ್ಯಮಾಪನಕ್ಕೆ ಒಳಪಟ್ಟು ಉತ್ತೀರ್ಣತೆ ಆಗಿರುವುದರಿಂದ ಪರೀಕ್ಷೆಗೆ ಕುಳಿತ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯ ಫಲಿತಾಂಶ ಶೇ.100ರ ಸಾಧನೆಯೊಂದಿಗೆ ಅತ್ಯಂತ ಹಿಂದುಳಿದ ಭಾಗದಲ್ಲಿ ಈ ಶಾಲೆಯು ಮಹತ್ತರ ಸಾಧನೆ ತೋರಿದಂತಾಗಿದೆ.
ಅಲ್ಲದೇ ಶಾಲೆಯ ಗುಣಾತ್ಮಕ ಫಲಿತಾಂಶ ಶೇ.85 ರೊಂದಿಗೆ “ಎ” ಶ್ರೇಣಿ ಸಾಧಿಸಿದೆ. ಒಟ್ಟಾರೆಯಾಗಿ 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 03 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆದಿದ್ದಾರೆ. ಮೇಘನಾ ಗೌಡ 92%, ಶಫಾಬಾನು 89.6%, ಸುಮನಾ ಗೋಸಾವಿ 86% ಸಾಧಿಸಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು, ಅವರ ಏಳ್ಗೆಗೆ ಶ್ರಮಿಸಿದ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದ ಹಾಗೂ ಸಿಬ್ಬಂದಿಗಳನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪ್ರಕಾಶ ಆಚಾರಿ ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.