ಹೊನ್ನಾವರ: ಕರ್ಕಿ ಚೆನ್ನಕೇಶವ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿನಿಯರ ರಕ್ತದ ಹಿಮಗ್ಲೋಬಿನ್ ಪ್ರಮಾಣ ಪರೀಕ್ಷೆ ಜರುಗಿತು.
ಚೆನ್ನಕೇಶವ ಪ್ರೌಢಶಾಲೆಯ ಇಂಟರಾಕ್ಟ ಕ್ಲಬ್ ಮತ್ತು ರೋಟರಿ ಕ್ಲಬ್ ಹೊನ್ನಾವರ ಇವರ ಸಹಯೋಗದಲ್ಲಿ ವಿದ್ಯಾರ್ಥಿನಿಯರಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಪರೀಕ್ಷೆ ನಡೆಯಿತು. ಪರೀಕ್ಷಾಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ರೋಟರಿ ಕ್ಲಬ್ ಅಧ್ಯಕ್ಷರಾದ ಮಹೇಶ ಕಲ್ಯಾಣಪುರ ಮಾಹಿತಿ ನೀಡಿದರು.
ರಕ್ತದ ಗುಂಪು ವರ್ಗಿಕರಣ, ರಕ್ತದಾನ ಮಾಡುದರಿಂದ ಆಗುವ ಪ್ರಯೋಜನ ಮತ್ತು ತುರ್ತು ರಕ್ತದಾನದ ಅಂಶಗಳನ್ನು ವಿವರಿಸಿ ರಕ್ತದಾನ ಮಾಡುವಂತೆ ಪೊತ್ಸಾಹಿಸಿದರು. ರೋಟರಿ ಸದಸ್ಯರಾದ ಗಣಪಯ್ಯ ಗುನಗ, ಗಾಯತ್ರಿ ಗುನಗ ಉಪಸ್ಥಿತರಿದ್ದರು. ಸಭಾ ಅಧ್ಯಕ್ಷರಾದ ಶಾಲಾ ಮುಖ್ಯಧ್ಯಾಪಕರಾದ ಎಲ್.ಎಮ್.ಹೆಗಡೆಯವರು ರೋಟರಿಯ ಕಾರ್ಯವನ್ನು ಶ್ಲಾಘಿಸಿದರು. ಇಂಟರಾಕ್ಟ ಕ್ಲಬ್ ನೋಡಲ್ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ಟರವರು ನಿರೂಪಿಸಿದರು. ಶ್ರೀಕಾಂತ ಹಿಟ್ನಳ್ಳಿ ವಂದಿಸಿದರು. ಹಿಮೋಗ್ಲೋಬಿನ್ ಪ್ರಮಾಣ ಹತ್ತಕ್ಕಿಂತ ಕಡಿಮೆ ಇದ್ದವರಿಗೆ ಉಚಿತವಾಗಿ ಪುಣಿಯ ಅಸ್ಮಿತಾ ಇವರು ನೀಡಿದ ಔಷಧಿ ವಿತರಿಸಲಾಯಿತು.