Slide
Slide
Slide
previous arrow
next arrow

ವಾಹನ ಸವಾರರಿಗೆ ಕಿರಿಕಿರಿಯಾಗುವಂತೆ ವಾಹನ ತಡೆಯುವಂತಿಲ್ಲ: ಡಿಜಿ

300x250 AD

ಕಾರವಾರ: ಇನ್ಮುಂದೆ ಪೊಲೀಸರು ವಾಹನ ಸವಾರರಿಗೆ ಅನಗತ್ಯ ಕಿರಿಕಿರಿಯಾಗುವಂತೆ ವಾಹನ ತಡೆಯುವಂತಿಲ್ಲ. ತುರ್ತಾಗಿ ತೆರಳುತ್ತಿರುವ ವಾಹನ ಸವಾರರನ್ನು ತಡೆದು ನಿಲ್ಲಿಸಿ ಇರಿಸುಮುರಿಸು ಉಂಟುಮಾಡುವ0ತಿಲ್ಲ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರವೇ ವಾಹನ ತಡೆಯಬೇಕು. ಇಲ್ಲವಾದಲ್ಲಿ ವಾಹನ ಸವಾರರನ್ನು ತಡೆಯುವಂತಿಲ್ಲ. ಪೀಕ್ ಅವರ್ ಟ್ರಾಫಿಕ್ ಆರಂಭಕ್ಕೂ ಮುನ್ನವೇ ಸಂಚಾರಿ ಪೊಲೀಸರು ಆಯಾ ಸ್ಥಳಗಳಲ್ಲಿ ನಿಯೋಜನೆಗೊಂಡಿರಬೇಕು. ಸಂಚಾರ ದಟ್ಟಣೆ ಆರಂಭವಾಗುವ ಮೊದಲು ತಮ್ಮ ಸಮಯಕ್ಕೂ ಮುಂಚಿತವಾಗಿ ಸ್ಥಳದಲ್ಲಿದ್ದರೆ ಟ್ರಾಫಿಕ್ ಜಾಮ್, ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಲು ಸಾಧ್ಯ.

300x250 AD

ಸಂಚಾರಿ ಪೊಲೀಸರು ಸಾಧ್ಯವಾದಷ್ಟು ದೇಹಕ್ಕೆ ಧರಿಸುವ ಕ್ಯಾಮರಾ ಧರಿಸಬೇಕು. ಇದರಿಂದ ವಿವಾದ ಹಾಗೂ ಪ್ರಕರಣಗಳಲ್ಲಿ ಸ್ಪಷ್ಟ ಸಾಕ್ಷ್ಯ ಒದಗಿಸಲು ಸಹಾಯವಾಗಲಿದೆ. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top