ಶಿರಸಿ:ಇಕೋ ಕೇರ್( ರಿ ) ಸಂಸ್ಥೆ, ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ ಸಂಸ್ಥೆ ಹಾಗು ಬ್ರಹ್ಮಶ್ರೀ ನಾರಾಯಣಗುರು ಸೇವಾ ಟ್ರಸ್ಟ್, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಯಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.10 ರಂದು ಪರಿಸರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಪ್ರೊ.ಡಾ. ವಿನಾಯಕ ಉಪಾಧ್ಯ, ಪರಿಸರ ಸಂರಕ್ಷಣೆಯಲ್ಲಿ ಮಕ್ಕಳ ಪಾತ್ರವನ್ನು ವಿವರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ, ಜಿಲ್ಲಾ ಶಾಖೆಯ ಅಧ್ಯಕ್ಷ ಮಹೇಶ್ ಡಿ. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ICTC ಕೌನ್ಸಿಲರ್ ಗಿರಿಜಾ ಹೆಗಡೆ, ಗ್ರೀನ್ ಕೇರ್ ಸಂಸ್ಥೆಯ ಜಿತೇಂದ್ರ ಕುಮಾರ್ ತೋನ್ಸೆ,ಮುಖ್ಯೋಪಾಧ್ಯಾಯಿನಿ ಯಮುನಾ ಆರ್.ಪೈ , SDMC ಅಧ್ಯಕ್ಷರು, ಸೇವಾ ಮನೋಭಾವನೆ ಹೊಂದಿದ ಪುಂಡಲೀಕ್ ಸಿರ್ಸಿಕರ್, ಮಂಜುನಾಥ್ ಪಟಗಾರ, ಜಗದೀಶ್ ನಾಯ್ಕ್, ರಾಜೇಶ್ ವೆರ್ಣೇಕರ್ ಹಲವರು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಜರಿದ್ದರು. ಇಕೋ ಕೇರ್ ಅಧ್ಯಕ್ಷ ಸುನಿಲ್ ಭೋವಿ ಸ್ವಾಗತ ಮಾಡಿದರು. ಕಾರ್ಯಕ್ರಮವನ್ನು ಔಷದ ಮಾರಾಟ ಪ್ರತಿನಿಧಿಗಳ ಸಂಘ, ಶಿರಸಿ ಘಟಕದ ಕಾರ್ಯದರ್ಶಿ ರಮೇಶ್ ಬಿ.ನಾಯ್ಕ್ ನಡೆಸಿ ಕೊಟ್ಟರು. ಮಕ್ಕಳಿಗೆ ಪರಿಸರ ಜಾಗೃತಿ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಇಕೋ ಕೇರ್ ಸಂಸ್ಥೆಯ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ಔಷಧಿ ಸಸ್ಯಗಳನ್ನು ನೆಡುವ ಮೂಲಕ ವಿಶೇಷ ರೀತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.