ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ಫಾರ್ಮಸಿ ಅಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದ ಯೋಗೇಂದ್ರ ಪಡುಕೋಣೆಯವರು ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಪದೋನ್ನತಿಗೊಂಡು ಧಾರವಾಡದ ಜಿಲ್ಲಾ ಔಷಧ ಉಗ್ರಾಣದ ಪ್ರಭಾರಧಾರಕರಾಗಿ ಶನಿವಾರ ವರ್ಗಾವಣೆಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಾಂಡೇಲಿ ತಾಲ್ಲೂಕು ಘಟಕದ ಕಾರ್ಯದರ್ಶಿಯಾಗಿದ್ದ ಯೋಗೇಂದ್ರ ಪಡುಕೋಣೆಯವರು ಪ್ರಾಮಾಣಿಕ ಕಾರ್ಯದಕ್ಷತೆಯಿಂದ ಗಮನ ಸೆಳೆದಿದ್ದರು. ಪದೋನ್ನತಿಗೊಂಡು ವರ್ಗಾವಣೆಗೊಂಡಿರುವ ಯೋಗೇಂದ್ರ ಪಡುಕೋಣೆಯವರಿಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಸೇರಿದಂತೆ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.