ರೋಹನ್ ದುವಾ ಹಾಗೂ ಕೈಲಾಶ್ ಖೇರ್ ನಡುವಿನ ಸಂದರ್ಶನದ ವಿವರಗಳು ಹೀಗಿವೆ.ಓದಿ:
ಕೆಕೆ: ನಾನು ನನ್ನ ಬಾಲ್ಯಾವಸ್ಥೆಯಿಂದ ಆರಂಭಿಸುತ್ತೇನೆ. ನನ್ನ ಬಾಲ್ಯ ಸ್ವಲ್ಪ ವಿಭಿನ್ನ.ವಿಚಿತ್ರ. ‘ಫಲ್ ಲಗಾ ಬೀಜ್ ಜೈಸಾ ಬೋಯಾ’ ಬಿತ್ತಿದಂತೆ ಬೆಳೆ ಎಂಬಂತೆ . ನಾನು ವಿಚಿತ್ರವಾಗಿ ವಿಭಿನ್ನವಾಗಿದ್ದೆ. ನಾನು ಕನಸು ಕಾಣುವುದನ್ನು ಎಲ್ಲ ನಿದ್ರೆ ಎಂದೇ ತಿಳಿದಿದ್ದರು.ಈ ಜಗತ್ತಿನಲ್ಲಿ ವಿಶಿಷ್ಟವಾಗಿರುವುದನ್ನು ಜನ ತಪ್ಪಾಗಿ ಗ್ರಹಿಸುತ್ತಾರೆ. ಜನ ಮನ ಬಂದಂತೆ ನುಡಿಯುತ್ತಾರೆ. ನನ್ನದು ಸಾಮಾನ್ಯ ಜೀವನವಲ್ಲ ಎಂದೇ ನನ್ನ ಅನಿಸಿಕೆ.
ಜನಿಸಿದ್ದು ದೆಹಲಿ. ನನ್ನ ತಂದೆ ಪೂಜಾರಿಗಳಾಗಿದ್ದರು. ಅವರೊಂದಿಗೆ ಹರಿದ್ವಾರ, ಋಷಿಕೇಶಗಳತ್ತ ಹೋಗುತ್ತಿದ್ದೆ. ಅಲ್ಲಿ ಅವರು ಎರಡೆರಡು ದೇಗುಲಗಳ ಪೂಜೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ನಾನು ಚಿಕ್ಕವನಿದ್ದಾಗ ಮನೆ ಬಿಟ್ಟೆ. ಆಶ್ರಮ ಸೇರಿದೆ. ಗಂಗಾತೀರದ ಆಶ್ರಮದ ತಟದಲ್ಲಿ ಬೆಳೆದೆ. ಸಂಸ್ಕೃತ ಓದಿದೆ. ಸಂಗೀತದೆಡೆ ಆಕರ್ಷಿತಗೊಂಡೆ. ಯಾರಾದರೂ ಕಲಾರಾಧಕರಿದ್ದರೆ ಅವರಿಗೆ ಮಾನ ಸಮ್ಮಾನಗಳು ಕಡಿಮೆಯೇ. ಹಾಗಾಗಿ ಸುಮ್ಮನಿದ್ದೆ. ಪ್ರೀತಿಸುವವರು ಕದ್ದು ಮುಚ್ಚಿ ಪ್ರೀತಿಸುವಂತೆ.
ನನ್ನ ಸಂಸಾರವೇ ನನ್ನ ಗುರು. ನಿರ್ದಿಷ್ಟವಾದ ಗುರುವೆಂಬುದಿಲ್ಲ. ಎಲ್ಲವೂ ಗುರು. ಬಾಲ್ಯದಿಂದಲೇ ಶಿವೋಪಾಸಕ ನಾನು. ವಿಷಕಂಠ ನನಗೆ ಪಾಠ.
ನಮ್ಮ ಪೂರ್ವಜರು ಆರೇಳು ಪೀಳಿಗೆ ಹಿಂದೆಯೇ ದಿಲ್ಲಿಗೆ ಬಂದರು. ಮಯೂರ ವಿಹಾರಖಂಡದ ಬಳಿ ಹಳ್ಳಿಗಳಲ್ಲಿ ನೆಲೆಸಿದ್ದರು. ಆ ಹಿಂದಿನ ಕಥೆ ಅಷ್ಟು ತಿಳಿದಿಲ್ಲ. ಎಲ್ಲಿ ಸುಡುವುದೋ ಅಲ್ಲಿಯೇ ಬೆಳಕು ಮೂಡುತ್ತದೆ. ಕೇಳುವಿಕೆ ನಮ್ಮ ರಕ್ತದಲ್ಲಿ ಇದೆ. ಬರಹದಲ್ಲಿ ಬದುಕಿನಲ್ಲಿ ಪರಮಾತ್ಮನ ಪ್ರಭಾವ ಇದ್ದೇ ಇದೆ. ಇದು ಪೂರ್ವಜರ ಕೊಡುಗೆ. ಅನಾಥರ ರೀತಿ ಬದುಕಿದರೂ ಪೂರ್ವಜರ ಪ್ರಭಾವ ಇದ್ದೇ ಇರುತ್ತದೆ.
ತೆರೆ ದಿವಾನೆ ಮೇ ಒಂದು ದಾಖಲೆಯಾಗಿದೆ. ಈಗಲು ಅದು ರೀಲ್ಸ್ ಆಗುತ್ತದೆ. 2006ರಲ್ಲಿ ತೆರೆ ದಿವಾನಾ ಕೈಲಾಸಾದ ಮೊದಲ ಆಲ್ಬಂ. 2005 ರಲ್ಲಿ ಅಲ್ಲಾಕೇ ಬಂದೇ ಎಲ್ಲ ಬಂದಿತ್ತು. ಹಳ್ಳಿ ಹಳ್ಳಿಗಳಿಗೆ ಹೋದಾಗ ಕಾರ್ಯಕ್ರಮ ಮಾಡಿದಾಗ ಮಾಡಿಸಿದಾಗ, ಸರ್ಕಾರಗಳಿಗೆ ಸಂಗೀತ ಉತ್ಸವ ಮಾಡಲು ವಿನಂತಿ ಮಾಡುತ್ತೇವೆ. ಇದರಿಂದ ಸಂಸ್ಕೃತಿ ಉಳಿಯುತ್ತದೆ. ಭಾರತ ಸಂಗೀತ, ಕಲೆ ಆಧ್ಯಾತ್ಮದ ದೇಶ. ಕಲೋಪಾಸನೆ ಭಾರತೀಯರಿಗಿಂತ ಬೇರಾರೂ ಚೆನ್ನಾಗಿ ಮಾಡಲಾರರು.
ರೋಹನ್ ದುವಾ: ಸಯ್ಯಾ ಎರಡನೇ ಆಲ್ಬಮ್ 2007ರಲ್ಲಿ ಬಿಡುಗಡೆಯಾಯಿತು. ಪ್ರಧಾನ ಮಂತ್ರಿಗಳಿಂದ ಹಿಡಿದು, ಯೋಗಿ ಆದಿತ್ಯನಾಥರವರೆಗೂ ನಿಮ್ಮ ಅಭಿಮಾನಿಗಳಿದ್ದಾರೆ. ಬಂಬ್ ಲೆಹರಿ, ಆದಿಯೋಗಿ ಅಲ್ಬಂ ಮಾಡಲು ಕಾರಣವೇನು.?
ನವರತ್ನಗಳಲ್ಲಿ ಪ್ರಧಾನಿಯವರು ನನ್ನನ್ನು ಸೇರಿಸಿಕೊಂಡರು. ಇದು ಪರಶಿವನ ಕೃಪೆ. ಪರಮಭಾಗ್ಯ. 2016ರಲ್ಲಿ ಸದ್ಗುರುವರ ಆಹ್ವಾನ ಬಂತು. ಪ್ರಸೂನ್ ಜೋಷಿಯವರಿಂದ ಆದಿಯೋಗಿ ಆಲ್ಬಂ ಸಂಯೋಜನೆವರೆಗೆ ಆಹ್ವಾನ ಬಂತು. ಅನಾದಿ ಅನಂತ, ಜೈ ಜೈ ಕೇದಾರಾ, , ಜೈ ಜೈ ಮಹಾಕಾಲ…ನಾನೇ ಬರೆದೆ.
ನೀವು ಹೇಗಿದ್ದಿರೋ ಅದು ಕಾಣಿಸುತ್ತದೆ, ಪ್ರತಿಫಲನವಾಗುತ್ತದೆ. ಪ್ರಧಾನಿ ಮೋದಿಯವರು, ಯೋಗಿ ಆದಿತ್ಯನಾಥರವರು ಯೋಗಿಗಳೇ, ಕೇವಲ ರಾಜನೀತಿತಜ್ಞರಲ್ಲ. ಕಾರ್ಯನೀತಿತಜ್ಞರು. ಹಾಗಾಗಿ ಇವರು ಸಾಧಕರೆನ್ನಬಹುದು. ನಿಸ್ವಾರ್ಥಿಗಳಿವರು.ಅವರೇ ಈ ದೇಶ ನಡೆಸಬಲ್ಲರು. ಇಲ್ಲದಿದ್ದರೆ ದೇಶ ಒಡೆಯುತ್ತದೆ.
ಕೇದಾರ, ಉಜ್ಜೈನ್, ಕಾಶಿಯಂಥಹ ದೇಶಗಳನ್ನು ನಿರ್ಮಿಸಿದ ಮೋದಿಯವರ ಮೇಲೆ ಶಿವನ ವರದ ಹಸ್ತವಿದೆ. ನಿಂದಿಸುವವರೇ ಬಹಳಿದ್ದಾರೆ. ಆದರೂ ಅವರಿಗೆ ಆಯಾಸವಿಲ್ಲ. ನೀವು ಒಳ್ಳೆಯದು ಮಾಡಲು ಹೊರಟಾಗಲೇ ನಿಂದೆಗೆ ಗುರಿಯಾಗುತ್ತೀರಿ ಎನ್ನುವುದು ಜಗದ ಸತ್ಯ. ಪೃಥ್ವಿಯಲ್ಲಿ ಎರಡು ವಿಧದ ಜನರಿದ್ದಾರೆ ಒಂದು ಮಾತನಾಡುವ ವರ್ಗ, ಇನ್ನೊಬ್ಬರ ಕುರಿತು ಮಾತಾಡುವ ವರ್ಗ. ಆಲೋಚನೆ ಮಾಡುವುದು ಸುಲಭ. ಕಾರ್ಯಸಾಧನೆ ಕಠಿಣವಾದದ್ದು. ಅದು ಕಾರ್ಯಸಾಧಕರಿಗೆ ಮಾತ್ರ ಸಾಧ್ಯ.
ಬಾಹುಬಲಿ ಕುರಿತು… ಕ್ಯಾ ಕಭಿ ಅಂಬರ್ ಸೆ…ಬಾಹುಬಲಿ ಏನೆಂದು ಮೊದಲು ನಮಗೆ ತಿಳಿದಿರಲಿಲ್ಲ. ಇದೊಂದು ದಕ್ಷಿಣದ ಸಿನಿಮಾ ಎಂದಷ್ಟೇ ಗೊತ್ತಿತ್ತು. ಹಾಡುತ್ತಿದ್ದೆವು. ಕೀರ್ವಾಣಿಯವರು ತಾಂಡವ ಸ್ತೋತ್ರ ಹಾಡಲು ಕೇಳಿಕೊಂಡರು. ನಾನಂತು ಇದು ಬಾಲ್ಯದಿಂದಲು ಹಾಡುವ ಹಾಡೆಂದು ಎಣಿಸಿದೆ. ಎಂತಹ ಸುಂದರ ಶಿವ ಸಂಬಂಧಿ ಸಂಯೋಜನೆಗಳು…!! ತಮಿಳಿನಲ್ಲೂ ಹಾಡಲಾಯಿತು.
ನಂತರ ಅಮೇರಿಕಾ ತೆರಳಿದೆ. ಅಮೇರಿಕಾದ ಒಂದು ರೇಡಿಯೋ ಸಂದರ್ಶನ ಕೂಡಾ ನಡೆಯಿತು. ಬಾಹುಬಲಿ ಉಲ್ಲೇಖಿಸಿ ಐದು ಭಾಷೆಯ ದೊಡ್ಡ ಚಿತ್ರ ಎಂದರು. ಅದು ಖುಷಿ ನೀಡಿತು. ತಾಂಡವ ಸ್ತೋತ್ರ ವ್ಯಾಪಕವಾಗಬೇಕೆಂಬ ಆಸೆ ಇತ್ತಲ್ಲ…!? ಬಾಹುಬಲಿ ಶಿವಲಿಂಗ ತಂದು ತಾಯಿಗೆ ಅರ್ಪಿಸುವ ಪಾತ್ರ ಎಂತಹ ಅನುಭೂತಿಯದ್ದು ಪುರಾಣವನ್ನು ಮರುಕಳಿಸುವ ದೃಶ್ಯವದು..!!
ಮೊದ ಮೊದಲು ಅಲ್ಬಂ ಮಾಡಲು ಬಂದಾಗ ಅಳುಕಿತ್ತು. ರೆಕಾರ್ಡ್ ಕಂಪನಿಗಳಿಗೆ ಟ್ರಯಲ್ ಕೊಟ್ಟಗ ಈ ತರಹದ ಸ್ವರ ನಡೆಯದು , ಹಿರೋಯಿಕ್ ಆಗಿಲ್ಲ ಎಂದು ತಿರಸ್ಕಾರವಾಗಿತ್ತು. ಎಂದು ನೆನಪಿಸಿಕೊಂಡು ನಂತರದ ಕಥೆ ಬೇರೆಯದೇ ಬಿಡಿ. ಅವರ ಹಾಡು ಜನಮಾನಸದಲ್ಲಿ ಗುನುಗುನಿಸತೊಡಗಿತು ಎಂದಿದ್ದಾರೆ.
ರೊಮ್ಯಾಂಟಿಕ್ ಹಾಡೂ ಹಾಡಿದ್ದು ಸ್ವೀಕೃತವಾಗಿದೆ. ಜನರು ಕೈಲಾಶ್ ಖೇರರ ಹಾಡುಗಳಲ್ಲಿ ಶಾಂತಿಯ ಅಲೆ ಕಂಡಿದ್ದೂ ಕಂಡುಬರುತ್ತದೆ. ಸೂಫಿ ಟಚ್ ಸಹ ಇದೆ. ಪ್ರತಿ ಹಾಡಿಗೂ ಮಹತ್ವವಿದೆ. ಹಾಡೊಂದು ಹಸ್ತಾಕ್ಷರ, ಅದು ಪರಿಮಳ, ಅದು ಬಣ್ಣ. ಮೇಲಾಗಿ ಹಾಡುಗಳು ಜನರಿಗೆ ಏನೋ ಹೇಳುವುದರಿಂದ ಅವುಗಳ ಆಯ್ಕೆ ಹಿಂದೆ ಸೂಕ್ಷ್ಮವಿದೆ.
ಇನ್ನು ದಕ್ಷಿಣದ ಸಂಗೀತ ಮಾಂತ್ರಿಕ ಇಳಯ ರಾಜಾರೊಡನೆ ಕೂಡ ಒಳ್ಳೆ ಒಡನಾಟವಿದೆ. ಅವರು ತಪಸ್ವಿಗಳೇ.ಅವರ ವ್ಯಕ್ತಿತ್ವ ತ್ರೇತಾ, ದ್ವಾಪರ ಯುಗದ ನೆನಪು ತರುತ್ತದೆ. ಅವರ ವರ್ಚಸ್ಸು ಅಂತಹುದು. ಅವರು ಎಲ್ಲರೊಡನೆಯೂ ಹರಟೆಗೆ ತೆರೆದುಕೊಳ್ಳುವುದಿಲ್ಲ, ತುಂಬಾ ಸರಳ ವ್ಯಕ್ತಿತ್ವ ಅವರದು. ಹತ್ತಿರವಾದವರ ಜೊತೆ ಮಾತ್ರ ಹಾಸ್ಯ ಮಾಡುತ್ತಾರೆ. ಸಂಗೀತದ ಸಾಗರ ಅವರು. ನಮ್ಮೊಡನೆ ಅವರ ಅಂತರಾಳ ತೆರೆದುಕೊಳ್ಳುತ್ತದೆ. ತುಂಬಾ ಚೆನ್ನಾಗಿ ಹಾಸ್ಯ ಮಾಡುತ್ತಾರೆ.
ಇನ್ನು ಎ.ಆರ್. ರೆಹಮಾನ್ ಕಮ್ಮಿ ಮಾತಿನ ವ್ಯಕ್ತಿ. ಬರಿ ನೋಟ, ಮುಗುಳ್ನಗುವಿನಲ್ಲೇ ಸಂಹವನ ನಡೆಸುತ್ತಾರೆ. ಅಂತಹ ಪ್ರೇಮಮಯ ವ್ಯಕ್ತಿತ್ವ ಅವರದ್ದು. ಪ್ರೇಮವೆಂದರೆ ‘ ಪ್ಯಾಂ ಪ್ಯಾಂ ಪ್ಯಾಂ ಪ್ಯಾಂ’ ಎಂದು ಹಲುಬುವುದಲ್ಲ. ಅದರ ಅವಶ್ಯಕತೆ ಇಲ್ಲ. ನನಗೆ ರೆಹಮಾನ್ ಸರ್ ಒಡನೆ ಆಧ್ಯಾತ್ಮಿಕ ಸಂಬಂಧ ಏರ್ಪಡುತ್ತದೆ. ಸಾವಿರಾರು ಟೆರಾಬೈಟ್ ಡಾಟಾ ಟ್ರಾನ್ಸ್ಫರ್ ಆದಂತೆ. 2004ರಿಂದಲೂ ಅವರೊಡನೆ ಕುಟುಂಬದ ಸದಸ್ಯರಂತಹ ಒಡನಾಟವಿದೆ. ಅವರ ಮನೆಯಲ್ಲೇ ಇರುತ್ತಿದ್ದೆ. ಅವರ ಅಮ್ಮ ಮಗನಂತೆ ಕಾಣುವವರು. ಆಗ ನನಗೆ ಬಹಳ ಬೇಡಿಕೆ. ಆದರೆ ನಾನಲ್ಲಿ ಇಲ್ಲ ಶರೀರ ಸಹ ಅಸ್ವಸ್ಥತೆ ಹೊಂದಿತ್ತು. ಆಗ ಅಮ್ಮ ಇಲ್ಲೇ ಇರು, ವಿಶ್ರಾಂತಿ ಪಡೆ ಎಂದು ಆರೈಕೆ ಮಾಡಿದ್ದರು. ಹನಿ ಹನಿ ಹಿಂದಿ, ಇಂಗ್ಲೀಷಿನಲ್ಲಿ ಎಲ್ಲ ಮುಗಿಯುತ್ತಿತ್ತು. ಅಂತಹ ಆತ್ಮೀಯತೆ ಇದೆ.
ಹೀಗೆ ತಮ್ಮ ಸಾಧನೆಯ ಹಾದಿಯನ್ನು ನಿಗರ್ವದಿಂದ, ವಿನಯದಿಂದ ತೆರೆದುಕೊಂಡು ಎ. ಆರ್ ರೆಹಮಾನ್ ಸಂಯೋಜನೆ ಮಾಡಿದ ಜನಪ್ರಿಯ ಯೂ ಹಿ ಚಲಾ ಯೂ ಚಲಾ….ಎಂಬ ಹಾಡಿನೊಡನೆ ಸಂವಾದ ಮುಕ್ತಾಯವಾಗಿಸಿದರು.