ಕೇರಳ ಸ್ಟೋರಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನರೆಲ್ಲ ಮುಗಿಬಿದ್ದು ನೋಡುತ್ತಿದ್ದರೆ. ಚಿತ್ರವನ್ನು ಜನತೆ ಸ್ವೀಕರಿಸಿದೆ. ಇದರ ಜೊತೆ
ಬನಾರಸ್ ಜನರ ಮಾತನ್ನು ಕೇಳಬೇಕು.
ಈ ಚಿತ್ರ ಸತ್ಯವೇ?ಅಥವಾ ಸತ್ಯಕ್ಕೆ ದೂರವೇ?
ಈ ಚಿತ್ರ ಕೇವಲ ಒಂದು ನಿದರ್ಶನ ಮಾತ್ರ. ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದೆ. ಇದು ಇಸ್ಲಾಮಿನ ಗಜ್ವಾ ಎ ಹಿಂದ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತೋರಿಸುವ ಚಿತ್ರಣ.
ಈ ಚಿತ್ರ ಏಕೆ ನೋಡಬೇಕು?
ನಾವು ಹಿಂದುಗಳು ಧರ್ಮದ ಬಗ್ಗೆ ಆಚರಣೆಯ ಬಗ್ಗೆ ಮಕ್ಕಳಿಗೆ ಹೇಳುವುದೇ ಇಲ್ಲ.ಆಂಗ್ಲ ಸಂಸ್ಕೃತ ಹಿಂದೆ ಓಡುತ್ತಿದ್ದೇವೆ.ಇದು ಅಧಃಪತನಕ್ಕೆ ಕಾರಣ. ಈ ಎಲ್ಲ ವಿಷಯಗಳನ್ನು ಚಿತ್ರದಲ್ಲಿ ಅದ್ಭುತವಾಗಿ ಮನಮುಟ್ಟುವಂತೆ ಮೂಡಿಬಂದಿದೆ.
ಚಿತ್ರದಲ್ಲಿ ತೋರಿಸಿದ್ದು ಸರಿ ಇದೆ. ಹೆಣ್ಣುಮಕ್ಕಳಾದ ನಾವು ಓದುವಾಗ ಹೇಗೆ ಕಾಣುತ್ತೇವೆ. ಹಾಸ್ಟೆಲ್ ಗಳಲ್ಲಿ ಚಿತ್ರದಲ್ಲಿ ತೋರಿಸಿದಂತೆ ಹೇಗೆ ಮಾತನಾಡುತ್ತಾರೆ. ಬ್ರೇನ್ ವಾಷ್ ಮಾಡಲಾಗುತ್ತದೆ. ತರ್ಕ ಕಳೆದುಕೊಂಡರೆ ಹೀಗಾಗುತ್ತದೆ. ಹುಡುಗಿಯರು ಜಾಗೃತ ಆಗಬೇಕು ಧರ್ಮದ ಬಗ್ಗೆ ತಿಳಿಯಬೇಕು ನಂತರ ಪ್ರತಿಕ್ರಿಯೆ ನೀಡಬೇಕು.
ಇದು ಸುಂದರ ಚಿತ್ರ. ನನ್ನ ಪ್ರಕಾರ ಪ್ರತಿ ಹಿಂದು ಹೆಣ್ಣುಮಕ್ಕಳು ನೋಡಬೇಕಾದ ಮೂವಿ. ಚಿತ್ರ ಮನಮುಟ್ಟಿದ್ದನ್ನು ಹೇಳಲಿಕ್ಕಾಗದು. ನಾವು ಹಿಂದುಗಳಾಗಿರಬೇಕು. ಎಂದಿಗೂ ಮತಾಂತರ ಹೊಂದಬಾರದು. ನಮ್ಮ ಪೀಳಿಗೆಯ ಪಾಲಕರಿಗಿದೊಂದು ಪಾಠ. ಮಕ್ಕಳಿಗೆ ಹಿಂದು ಧರ್ಮದ ಬಗ್ಗೆ ತಿಳಿಸಬೇಕು. ಇತರ ಧರ್ಮದಲ್ಲಿ ಕಲಿಸುತ್ತಾರೆ.ಹಾಗಾಗಿ ಅವರು ಮತಾಂತರ ಹೊಂದುವುದಿಲ್ಲ. ಕಟ್ಟಾ ಹಿಂದುಗಳಾಗಬೇಕಿದೆ. ಪಾಲಕರು ಪೂಜೆ ಭಜನೆ ಮಾಡುತ್ತಾರೆ ಆದರೆ ಮಕ್ಕಳಿಗೆ ಅದು ಅಭ್ಯಾಸವಾಗಿಲ್ಲ. ಅವರು ನಮ್ಮ ದೇವರ ಬಗ್ಗೆ ಏನೇ ಹೇಳಿದರೂ ಸುಮ್ಮನಿದ್ದು ಬಿಡುತ್ತಾರೆ.
ಇಡೀ ಜಗತ್ತಲ್ಲಿ ಇಂತಹ ಉದಾರವಾದ ಧರ್ಮ ಇನ್ನೊಂದು ಇಲ್ಲ. ಮಾನವೀಯತೆ ತಿಳಿಸುವ ಧರ್ಮ ಹಿಂದು ಧರ್ಮ. ಮತಾಂತರವನ್ನು ನಿಷೇಧಿಸಬೇಕು. ಯೋಗಿಜಿಯವರಂತಹ ಮುಖ್ಯಮಂತ್ರಿಗಳು ಪ್ರತಿ ರಾಜ್ಯದಲ್ಲೂ ಬರಬೇಕು.
ತಂದೆ ತಾಯಿಗಳು ಈ ಚಿತ್ರ ನೋಡಲೇಬೇಕು. ಯಾರು ಶತ್ರು ಯಾರು ಮಿತ್ರ ಎಂಬುದನ್ನು ಅರ್ಥ ಮಾಡಿಸಬೇಕು. ಹಾಗಿದ್ದರೆ ಮಾತ್ರ ರಾಮ್ ನಾಮ್ ಸತ್ಯ ಹೇ ಉಳಿಯುತ್ತದೆ.
ಹಿಂದೆ ಪಠಾಣ್ ಚಿತ್ರ ಬಂದಾಗ ಯಾವ ರೀತಿಯ ಪ್ರತಿಕ್ರಿಯೆ ಬಂತು ಏನಾಯಿತು ಎಂದು ಜನ ತಿಳಿಯಲಿ. ಎಡಪಂಥೀಯರು ಯಾವರೀತಿ ನಡೆದುಕೊಂಡರು ಎಂದು ತಿಳಿಯಲಿ. ಈ ಚಿತ್ರ ನೋಡುತ್ತ ರೋಮಾಂಚನವಾಗುತ್ತದೆ. ಈ ಚಿತ್ರ ಕರಮುಕ್ತವಾಗಬೇಕು. ಪ್ರತಿ ಪಾಲಕರು ಮಕ್ಕಳಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಸಲೇಬೇಕು.
ಒಳ್ಳೆಯ ಸಂಸ್ಕಾರ ಕಲಿಸಬೇಕು. ಈ ಚಿತ್ರ ಕಣ್ಣು ತೆರೆಸುತ್ತದೆ. ನಿಜ ಚಿತ್ರಣ ತೋರಿಸಿ ಕಣ್ಣು ತೆರೆಸುತ್ತದೆ. ಎಲ್ಲರೂ ನೋಡಿ. ಎಲ್ಲ ಸಹೋದರಿಯರು ಜಾಗೃತರಾಗಿರಿ. ಮೇರೆ ಅಬ್ದುಲ್ ವೇಸೆ ನಹಿ ಎಂದು ಹೇಳಬೇಡಿ.
ದೇವರ ನಿಂದನೆ ಕೇಳಿ ಸುಮ್ಮನಿರಬಾರದು. ಕೇಳಿದರೆ ಅದು ನೂರು ಗೋಹತ್ಯೆಗೆ ಸಮ. ಅಂತಹವರ ಬಾಯಿ ಮುಚ್ಚಿಸಬೇಕು.
ಚಿತ್ರ ವಾಸ್ತವಿಕ ಮತ್ತು ಸತ್ಯ. 2008-9ರ ಸಮಯದಲ್ಲಿ, ಕರ್ನಾಟಕ ಕೇರಳಾದ್ಯಂತ ಮತಾಂತರ ಹಬ್ಬಿತ್ತು. ಈ ಅಂಕಿ ಸಂಖ್ಯೆಯೂ ಸತ್ಯ. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಿದೆ. ವಿದ್ಯಾರ್ಥಿಗಳು ಮತಾಂತರ ಕಾರ್ಯದಲ್ಲಿ ಮುಂದಿದ್ದಾರೆ. ಧರ್ಮವಿರೋಧಿ ಸಂಘಟನೆಯಲ್ಲಿ ನಿರತರೂ ಆಗಿದ್ದಾರೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಗೊಳಿಸಬೇಕಿದೆ.
ಈ ಚಿತ್ರ ನೋಡುವಾಗ ಯುವತಿಯರೂ ಬಂದಿದ್ದರು, ಅಳುವಂಥಹ ದೃಶ್ಯ ಬಂದಾಗ ನಗುತ್ತಿದ್ದರು. ಇದರಿಂದ ಯುವತಿಯರು ಯಾವ ಮಟ್ಟಕ್ಕೆ ಕುಸಿದಿದ್ದಾರೆ ಎಂದು ಬೇಸರವಾಗುತ್ತದೆ ಇದು ವಿಪರ್ಯಾಸ ಎಂಬ ವೀಕ್ಷಕನ ಮಾತು ಯೋಚನೆಗೆ ದೂಡಿದೆ.
ಯಾವುದೇ ದೇಶವನ್ನು ನಾಶಮಾಡಬೇಕಾದರೆ, ಅದರ ಸಂಸ್ಕೃತಿಯನ್ನು ನಾಶಮಾಡಿದರೆ ಸಾಕು. ಎಂಬ ನುಡಿಯಿದೆ. ಹಾಗೇ ನಮ್ಮ ಸಂಸ್ಕೃತಿ ಬಿಟ್ಟರೆ ದೇಶ ಉಳಿಯುವುದಿಲ್ಲ.
ಇಂತೆಲ್ಲ ಮಾತುಗಳು ‘ದ ಕೇರಳ ಸ್ಟೋರಿ’ ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಗ್ಯಾಲರಿಯ ಮಾತುಗಳಾಗಿವೆ.