ದಾಂಡೇಲಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ನಗರ – 2.0 ಯೋಜನೆಯಡಿ ಮೇರಿ ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್, ಮೇರಾ ಸ್ವಚ್ಛ ಶೆಹರ್ ಯೋಜನೆಯನ್ನು ನನ್ನ ಲೈಫ್ ನನ್ನ ಸ್ವಚ್ಛ ಶೆಹರ್ ಕಾರ್ಯಕ್ರಮದಡಿ ನಗರ ವ್ಯಾಪ್ತಿಯಲ್ಲಿ ರೆಡ್ಯೂಸ್, ರಿ ಯೂಸ್ ಮತ್ತು ರಿಸೈಕಲ್ ಎಂಬ ಆರ್.ಆರ್.ಆರ್ ಕೇಂದ್ರವನ್ನು ಗುರುತಿಸಿ 6 ವಿವಿಧ ಬಗೆಯ ತ್ಯಾಜ್ಯವನ್ನು ಮೇ 20ರಿಂದ ಜೂನ್ 5ರವರೆಗೆ ನಿರ್ವಹಿಸುವ ಕುರಿತು ನಗರಸಭೆಯ ವ್ಯಾಪ್ತಿಯಲ್ಲಿ ಒಟ್ಟು 5 ಕಡೆಗಳಲ್ಲಿ ಆರ್.ಆರ್.ಆರ್ ಕೇಂದ್ರಗಳು ಕಾರ್ಯನಿರ್ವಹಿಸಲಿದೆ ಎಂದು ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್ ಹೇಳಿದ್ದಾರೆ.
ಸಕ್ಕಲ್ಗಾ, ಅಂಬೇಡ್ಕರ್ ಭವನ, ಸಂಡೇ ಮಾರ್ಕೆಟ್, ಟೌನ್ ಶಿಪ್ ನಲ್ಲಿರುವ ಕೊಂಡವಾಡ ಮತ್ತು ಹಳೆದಾಂಡೇಲಿಯಲ್ಲಿ ಆರ್.ಆರ್.ಆರ್ ಕೇಂದ್ರಗಳು ಮೇ:20 ರಿಂದ ಜೂನ್:05 ರವರೆಗೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಆಟಿಕೆ ವಸ್ತು, ತ್ಯಾಜ್ಯ ಹಳೆಯ ಬಟ್ಟೆ, ದಿನಪತ್ರಿಕೆ/ಮಾಸ ಪತ್ರಿಕೆ, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನೇರವಾಗಿ ಈ ಕೇಂದ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೀಡಬಹುದಾಗಿದೆ. ಸ್ವಚ್ಚತೆಯ ಹಿತದೃಷ್ಟಿಯಿಂದ ಈ ಮಹತ್ವಪೂರ್ಣ ಅಭಿಯಾನದಲ್ಲಿ ನಾಗರಿಕರು ಆಸಕ್ತಿಯಿಂದ ಭಾಗವಹಿಸಿ, ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಆರ್.ಎಸ್.ಪವಾರ್ ಅವರು ಮನವಿ ಮಾಡಿದ್ದಾರೆ.