ಕಾರವಾರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರನ್ನ ಗೆಲ್ಲಿಸಿ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.
ನಗರದ ಬೈತ್ಕೋಲದಲ್ಲಿ ಸತೀಶ್ ಸೈಲ್ ಪರ ಪ್ರಚಾರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಸತೀಶ್ ಸೈಲ್ ಐದು ವರ್ಷ ಶಾಸಕನಾಗಿದ್ದ ಕಾಲದಲ್ಲಿ ಹಲವು ಅಭಿವೃದ್ದಿ ಚಟುವಟಿಕೆಯಾಗಿದೆ. ಮೆಡಿಕಲ್ ಕಾಲೇಜು, ಪ್ರವಾಸೋದ್ಯಮ ಅಭಿವೃದ್ದಿ ಹೀಗೆ ಹಲವು ಕಾರ್ಯಗಳಾಗುವುದಕ್ಕೆ ಸೈಲ್ ಸಹ ಕಾರಣ ಎಂದು ದೇಶಪಾಂಡೆ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಲೂಟಿಗಿಳಿದಿದೆ. ಭ್ರಷ್ಟಾಚಾರದಲ್ಲಿಯೇ ಬಿಜೆಪಿ ನಾಯಕರು ಕಾಲ ಕಳೆಯುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಜನರಿಗೆ ಅಕ್ಕಿ, ಗೋಧಿ, ಬೇಳೆ, ಎಣ್ಣೆ ಹೀಗೆ ಎಲ್ಲಾ ಪದಾರ್ಥ ಕೊಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 40 ಪರ್ಸೆಂಟ್ ಕಮಿಷನ್ ಹೊಡೆಯುವ ವೇಳೆ ಇಷ್ಟೊಂದು ವಸ್ತು ಸರ್ಕಾರದಿಂದ ಹೇಗೆ ಕೊಡಲು ಸಾಧ್ಯ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುವುದು. ಅಲ್ಲದೇ ಜನರಿಗೆ ಮತ್ತೆ ಹತ್ತು ಕೆಜಿ ಅಕ್ಕಿ ಕೊಡಲಾಗುವುದು. ಬಿಜೆಪಿಗೆ ಭ್ರಷ್ಟಾಚಾರ ಬಿಟ್ಟು ಬೇರೆನೂ ಗೊತ್ತಿಲ್ಲ. ಭ್ರಷ್ಟಾಚಾರ ಸದ್ಯ ಗಗನಕ್ಕೆ ಹೋಗಿದ್ದು ಈ ಬಾರಿ ಜನರು ಈ ಭ್ರಷ್ಟ ವ್ಯವಸ್ಥೆ ಹೋಗಲಾಡಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಉಚಿತ ವಿದ್ಯುತ್, ಗೃಹಲಕ್ಷಿ, ಹತ್ತು ಕೆಜಿ ಅಕ್ಕಿ, ಯುವ ನಿಧಿ ಸೇರಿದಂತೆ ಹಲವು ಗ್ಯಾರಾಂಟಿ ಯೋಜನೆಗಳನ್ನ ಜನರು ಮುಂದೆ ನೀಡಿದ್ದೇವೆ. ಸರ್ಕಾರ ಬಂದ ತಿಂಗಳಳೊಳಗೆ ಈ ಗ್ಯಾರಂಟಿ ಈಡೇರಿಸಲಾಗುವುದು. ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರ ಎಂದು ದೇಶಪಾಂಡೆ ಹೇಳಿದ್ದಾರೆ.