ಧಾರವಾಡ: ಅರ್ಜುನ (ಶಾಂತಿನಿಕೇತನ) ಕಾಲೇಜು ಶೇ. 100% ಫಲಿತಾಂಶ
ಧಾರವಾಡದ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ 2023 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ಕಾಲೇಜಿನ ಫಲಿತಾಂಶವು ಶೇಕಡಾ 100 ರಷ್ಟಾಗಿದೆ.
ಕುಮಾರಿ.ಪ್ರಜ್ಞಾ ನಾಯಕ 600 ಕ್ಕೆ 576 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಇನ್ನುಳಿದಂತೆ ಸಾತ್ವಿಕ ಹೆಗಡೆ(575 ಅಂಕ), ಕಿರಣಕುಮಾರ ಮಡಿವಾಳ(570 ಅಂಕ), ಸವಿತ್ರು ಗದಗಕರ್(568 ಅಂಕ), ರಾಜನ್ ಶೆಟ್ಟಿ (565 ಅಂಕ), ಸ್ವರೂಪ್ ನಾಯ್ಕ್(565 ಅಂಕಗಳು), ಸಿದ್ಧಾರ್ಥ ಖನಗನ್ನಿ(563 ಅಂಕ), ಭೂಮಿಕಾ ಶೇಟ್(561 ಅಂಕ), ಧೀಮಂತ ನಾಯ್ಕ್(559 ಅಂಕ), ಕವನಾ ಗುನಗಾ(559 ಅಂಕ), ಶ್ರೇಯಾ ತೆಗ್ಗಿಹಳ್ಳಿ(559 ಅಂಕ), ಮಲ್ಲಿಕಾರ್ಜುನ ಜಿನರಲಿ(557 ಅಂಕ), ಸುಮಂತ ಭಾವಿಕಟ್ಟಿ(556 ಅಂಕ), ಪೂಜಾ ನಾಯ್ಕ್ ಬೆಣ್ಣೆ(555 ಅಂಕ), ಸ್ಪೂರ್ತಿ ಎಸ್ಎಮ್ಕೆ(555 ಅಂಕ), ಪ್ರಥಮ್ ತಂತ್ರಿ(554 ಅಂಕ), ಸಿದ್ದಬೀರಪ್ಪಾ ಪೂಜಾರಿ(554 ಅಂಕ), ವೇದಾ ಹೆಗಡೆ(550 ಅಂಕ), ಕೇದಾರ ಹುಕ್ಕೇರಿ(549 ಅಂಕ), ದಿಶಾ ನಾಯ್ಕ್ (548 ಅಂಕ), ಸಂಪ್ರೀತಾ ಭಟ್(548 ಅಂಕ), ಅನಘಾ ಬೆಳಗಲಿ(545 ಅಂಕ), ನಬೀಲ್ಅಹ್ಮದ ಕರ್ಮಡಿ(545 ಅಂಕ), ಸ್ಪರ್ಶ ನಾಯ್ಕ್ (545 ಅಂಕ), ವೃಂದಾ ಪಾಟೀಲ(545 ಅಂಕ), ಧೀರಜ ಮುರಗೋಡ(544 ಅಂಕ), ಪ್ರಫುಲ್ ಮಡಿವಾಳ(543 ಅಂಕ), ರೋಶನ್ ಬಟ್ಟೂರ್(542 ಅಂಕ), ಸಮರ್ಥ ಕೋಟಿ(542 ಅಂಕ), ಶಿವಯೋಗಿ ಉರೋಳಗಿನ್(542 ಅಂಕ), ಶ್ರೀಪ್ರಿಯಾ ಹನುಮಸಾಗರ(541 ಅಂಕ), ಶ್ರೀಕೃಷ್ಣಾ ಹೆಗಡೆ(540 ಅಂಕ) ಪಡೆದಿದ್ದಾರೆ. ಸಂಸ್ಕೃತ ವಿಷಯದಲ್ಲಿ 1, ಗಣಿತಶಾಸ್ತ್ರ ವಿಷಯದಲ್ಲಿ 4 ಜನ ಮತ್ತು ಕಂಪ್ಯೂಟರ ಸೈನ್ಸ್ ವಿಷಯದಲ್ಲಿ 2 ವಿದಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದು, ಒಟ್ಟು
100 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಡಿಸ್ಟಿಂಕ್ಶನ್ ನಲ್ಲಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 5 ಜನ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.