ಹೊನ್ನಾವರ: ತಾಲೂಕು ಆಸ್ಪತ್ರೆಯ ಅಂಬುಲೆನ್ಸನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ ಶೆಟ್ಟಿ ತಮಗೆ ಅಂಬುಲೆನ್ಸನಲ್ಲಿ ದೊರೆತ ಕಿವಿಯೋಲೆಯನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾರ ತಾಲೂಕ ಆಸ್ಪತ್ರೆಯಿಂದ ಮಂಗಳೂರಿಗೆ ಅನಾರೊಗ್ಯಕ್ಕೊಳಗಾದ ವ್ಯಕ್ತಿಯನ್ನು ಬಿಟ್ಟು ಪುನಃ ಹೊನ್ನಾವರ ಬಂದಾಗ ಕಿವಿಯೋಲೆ ಗಮನಿಸಿದ್ದಾರೆ. ರೋಗಿಯ ಸಂಭದಿಕರ ಮೂಲಕ ಕಾಣಿಯಾದ ಮಾಹಿತಿ ಪಡೆದು ಅವರ ಸಂಭದಿಕರ ಮೂಲಕ ಕಿವಿಯೋಲೆಯನ್ನು ಕರ್ತವ್ಯದಲ್ಲಿದ್ದ ದಂತವೈದ್ಯೆ ಡಾ. ಅನುರಾಧ ನಾಯಕ ಮೂಲಕ ಹಸ್ತಾಂತರಿಸಿದರು. ಈ ವೇಳೆ ಹಿರಿಯ ವಾಹನ ಚಾಲಕರಾದ ಮಂಜುನಾಥ ನಾಯ್ಕ ಹಾಜರಿದ್ದರು.
ಮಾಧ್ಯಮದವರೊಂದಿಗೆ ಚಾಲಕ ಶ್ರೀಧರ ಶೆಟ್ಟಿ ಮಾತನಾಡಿ, ವಾಹನದಲ್ಲಿ ದೊರೆತ ವಸ್ತುವನ್ನು ಸಂಭದಿಸಿದವರಿಗೆ ಪ್ರಾಮಾಣಿಕವಾಗಿ ಮರಳಿಸುದು ಪ್ರತಿಯೊರ್ವ ಚಾಲಕನ ಕರ್ತವ್ಯವಾಗಿತ್ತು. ಆ ಕಾರ್ಯ ನಾನು ಮಾಡಿದ್ದೇನೆ ಎಂದರು.