Slide
Slide
Slide
previous arrow
next arrow

ಜೆಡಿಎಸ್ ಲೆಕ್ಕಕ್ಕಿಲ್ಲ ಎನ್ನುತ್ತಿದ್ದವರಿಗೆ ನಾವೇನು ಎನ್ನುವುದನ್ನ ತೋರಿಸಿದ್ದೇವೆ: ಘೋಟ್ನೇಕರ್

300x250 AD

ಹಳಿಯಾಳ: ಸ್ವಾಭಿಮಾನದಿಂದ ಸೇರಿದ ಕಾರ್ಯಕರ್ತರನ್ನು ನೋಡಿ ಸಂತೋಷವಾಯಿತು. ಹಳಿಯಾಳದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ಜನರ ಒಗ್ಗೂಡಿದ್ದು ಇಲ್ಲ. ಇಷ್ಟೊಂದು ಜನರು ಸೇರುವ ಯಾವುದೇ ರೀತಿಯ ನಿರೀಕ್ಷೆ ಇರಲಿಲ್ಲ. ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುತ್ತಿದ್ದವರಿಗೆ ಜೆಡಿಎಸ್ ಏನು ಎನ್ನುವುದನ್ನು ತೋರಿಸಿದ್ದೇವೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷದಿಂದ ಆಡಳಿತ ನಡೆಸಿದ ಶಾಸಕರು ಎಲ್ಲ ಕೆಲಸಗಳನ್ನು ವಿಳಂಬ ಮಾಡುತ್ತಾ ಬಂದಿದ್ದು, ದಾಂಡೇಲಿ ಮತ್ತು ಜೊಯಿಡಾ ಭಾಗದಲ್ಲಿ ರಾತ್ರಿ 11:30ಕ್ಕೆ ಕುಡಿಯುವ ನೀರು ಬಿಡುತ್ತಿದ್ದು, ಅದೂ ಕೂಡ ಪೂರ್ಣ ಪ್ರಮಾಣದಲ್ಲಿಲ್ಲ. ಇದನ್ನೆಲ್ಲ ನೋಡಿದರೆ ತುಂಬಾ ನೋವಾಗುತ್ತದೆ ಎಂದರು.
ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ 12 ಸಾವಿರಕ್ಕೂ ಹೆಚ್ಚಿನ ಜನತೆಯ ಬಗ್ಗೆ ಪ್ರಸ್ತಾಪಿಸಿ, ಇಡೀ ಮೆರವಣಿಗೆಯಲ್ಲಿ ಎಲ್ಲಿಯೂ ಜೆಡಿಎಸ್ ಬಾವುಟ ಕಾಣದೇ ಇರುವ ಬಗ್ಗೆ ಗಮನ ಸೆಳೆದು, ಕೇಸರಿಮಯವಾಗಿರುವುದರ ಕುರಿತು ಹೇಳಿದರು. ಇಡೀ ಮೆರವಣಿಗೆಯಲ್ಲಿ ಯಾವುದೇ ಆಮಿಷ ಮತ್ತು ಒತ್ತಾಯಕ್ಕೆ ಮಣಿಯದ ವಾರಕರಿ ಸಮುದಾಯ ಮತ್ತು ಕಬ್ಬು ಬೆಳೆಗಾರ ರೈತರು, ಜನರ ಜಮಾವಣೆ ಬಯಸಿರುವುದನ್ನು ತೋರಿಸುತ್ತಿದೆ. ಈಗಾಗಲೇ ಬದಲಾವಣೆಯ ಗಾಳಿ ಬೀಸಿದೆ. ಜನತೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಹೊಂದಾಣಿಕೆ ಆಗಿರುವ ಕುರಿತು ವ್ಯಂಗ್ಯವಾಡುತ್ತಿದ್ದು, ಯಾವುದೇ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಂದೇ ದಿನ ನಾಮಪತ್ರ ಸಲ್ಲಿಸಿದ್ದಿಲ್ಲ. ಆದರೆ ಈ ಬಾರಿಯ ನಾಮಪತ್ರ ಸಲ್ಲಿಕೆಯು ಒಂದೇ ದಿನ 30 ನಿಮಿಷಗಳ ಅಂತರದಲ್ಲಿ ಆಗಿರುವುದನ್ನು ಗಮನಿಸಿ ಹೇಳುತ್ತಿದ್ದಾರೆ ಎಂದರು.
ನಾಮಪತ್ರ ಸಲ್ಲಿಕೆಯ ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿದ್ದು, ಎಲ್ಲ ಜಾತಿ- ಮತ- ಪಂಥದ ಜನತೆ ಆಶೀರ್ವದಿಸಿದ್ದು ಗಮನಾರ್ಹವಾಗಿದೆ. ಕೇಸರಿ ಒಂದೇ ಪಕ್ಷದ ಸ್ವತ್ತಲ್ಲ ಎನ್ನುವುದನ್ನು ಸಾರಿ ಹೇಳಿದ್ದೇವೆ ಎಂದು ಪ್ರಬಲವಾಗಿ ಹೇಳಿದರು. ನುಡಿದಂತೆ ನಡೆದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ನಿಲುವಿನಂತೆ ಜನರ ಬೆಂಬಲ ದೊರೆತಿರುವುದು ಆಶಾದಾಯಕವಾಗಿದೆ ಎಂದರು. ಈ ಹಿಂದೆ ದೇಶಪಾಂಡೆಯವರ ಜೊತೆಯಲ್ಲಿದ್ದಾಗ ಮಾಡಿದ ಚುನಾವಣೆಯಲ್ಲಿ ಜೊತೆಗಿದ್ದ ನಂಬುಗೆಯ ಕಾರ್ಯಕರ್ತರ ತಂಡ ಇಂದಿಗೂ ನನ್ನ ಜೊತೆಯಲ್ಲಿದೆ. ಅದೇ ನನ್ನ ದೊಡ್ಡ ಶಕ್ತಿಯಾಗಿದೆ. ನಾನು ಯಾವುದೇ ರೀತಿಯಲ್ಲೂ ದುಡ್ಡಿನ ಬಲದ ಮೇಲೆ ಚುನಾವಣೆ ಮಾಡದೇ ನನ್ನಿಂದ ಈವರೆಗೂ ಅವರ ಕಷ್ಟಗಳಿಗೆ ಹಗಲು ರಾತ್ರಿಯೆನ್ನದೇ ಸ್ಪಂದಿಸಿದ ನನ್ನ ವ್ಯಕ್ತಿತ್ವ ನಂಬಿರುವ ಜನರ ವಿಶ್ವಾಸದ ಮೇಲೆ ಚುನಾವಣೆ ಮಾಡುತ್ತಿದ್ದೇನೆ ಎಂದು ಘಂಟಾಘೋಷವಾಗಿ ಹೇಳಿದರು. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಈ ತಿಂಗಳ ಕೊನೆಯಲ್ಲಿ ಹಳಿಯಾಳಕ್ಕೆ ಭೇಟಿ ನೀಡಲಿದ್ದು, ದಿನಾಂಕ ನಿಗದಿಯಾಗಿಲ್ಲವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ತುಕಾರಾಮ ಗೌಡ, ಲಿಂಗಾಯತ ಮುಖಂಡ ಶಿವು ದೇಸಾಯಿ, ವಿಜಯ ಬೊಬಾಟಿ, ನಾರಾಯಣ ಬೆಳಗಾಂವಕರ, ಶ್ರೀನಿವಾಸ ಘೋಟ್ನೇಕರ್ ಇದ್ದರು.

300x250 AD
Share This
300x250 AD
300x250 AD
300x250 AD
Back to top