Slide
Slide
Slide
previous arrow
next arrow

ಸಾಂಗವಾಗಿ ನಡೆದ ಮಹಾಬಲೇಶ್ವರ ರಥೋತ್ಸವ

300x250 AD

ಗೋಕರ್ಣ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಏ.19ರಂದು ರಾತ್ರಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಕ್ಷತ್ರಿಯ ಕೋಮಾರಪಂತ ಸಮಾಜದವರಿಂದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.
ಸಮಾಜದ ಹಿರಿಯರು ಸಮಾಜದ ಉನ್ನತಿಗೋಸ್ಕರ ಲೋಕಕಲ್ಯಾಣಕ್ಕಾಗಿ ಸಾಕ್ಷಾತ್ ಶಿವನ ಆತ್ಮಲಿಂಗವಿರುವ ಗೋಕರ್ಣ ಕ್ಷೇತ್ರದಲ್ಲಿ 1986ರಲ್ಲಿ ಆರಂಭಿಸಿದ ರಥೋತ್ಸವ ಮತ್ತು ಬೆಳ್ಳಿ ಕೊಡದಿಂದ ರುದ್ರಾಭಿಷೇಕ ಮುಂತಾದ ಸೇವೆ ನಡೆದುಕೊಂಡು ಬಂದಿದೆ. ಅದರಂತೆ ಏ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ನಂತರ ರಥವನ್ನು ಎಳೆಯಲಾಯಿತು.
ಶ್ರೀಕ್ಷೇತ್ರದ ಅತ್ಯಂತ ಭವ್ಯ ಇತಿಹಾಸವುಳ್ಳ ಶ್ರೀ ಮಹಾಬಲೇಶ್ವರನ ಅತ್ಯಂತ ಪ್ರಿಯ ಭಕ್ತರಲ್ಲಿ ಕೋಮಾರಪಂತ ಸಮಾಜದವರು ಒಬ್ಬರು. ಇವರು ರಥೋತ್ಸವದ ವೈಭವವನ್ನು ಕಣ್ಣಾರೆ ನೋಡಿ ಅನುಭವಿಸಿ ಶ್ರೀ ಮಹಾಬಲನ ಕೃಪಾಶೀರ್ವಾದ ಪಡೆದರು. ಇಂತಹ ಧಾರ್ಮಿಕ ಪರಂಪರೆ ನಡೆಸಲು ತಮ್ಮ ಸಮಾಜಕ್ಕೆ ಅನುಮತಿ ಸಿಕ್ಕಿರುವುದು ನಮ್ಮ ಪುಣ್ಯ ಎನ್ನುತ್ತಾರೆ ಕೋಮಾರಪಂತ ಸಮಾಜದವರು.
ಬೇರೆಲ್ಲ ಕಡೆಗಳಲ್ಲಿ ಹಗಲಿನಲ್ಲಿ ರಥವನ್ನು ಎಳೆದರೆ ಕೋಮಾರಪಂತ ಸಮಾಜದವರು ರಾತ್ರಿ ರಥವನ್ನು ಎಳೆಯುತ್ತಾರೆ. ರಥಗಳಿಗೆ ವಿದ್ಯುತ್ ಅಲಂಕಾರ ಮಾಡಿ ಆಕರ್ಷಕವಾಗಿ ಕಾಣುವಂತೆ ಮಾಡುವುದರಿಂದ ವಿವಿಧ ಸಮಾಜದ ಭಕ್ತರು ಕೂಡ ಇದನ್ನು ನೋಡಲು ಇಲ್ಲಿಗೆ ಆಗಮಿಸುತ್ತಾರೆ. ಶಿವಲಿಂಗ ದರ್ಶನ, ಗಣಪತಿ ದೇವರ ಪೂಜೆ ಸೇರಿದಂತೆ ವಿವಿಧ ವಿಧಿವಿಧಾನಗಳನ್ನು ನಡೆಸಿದರು.

300x250 AD
Share This
300x250 AD
300x250 AD
300x250 AD
Back to top