ಶಿರಸಿ : ಇಲ್ಲಿನ ನೀಲೇಕಣಿ ಶ್ರೀ ಗಣೇಶ ಮಂದಿರದ ಶ್ರೀ ಪ್ರಸನ್ನ ಗಣಪತಿ ದೇವರ 25 ನೇ ವರ್ಧಂತಿ ಉತ್ಸವವು ಏ.21 ರಿಂದ 23 ರ ವರೆಗೆ ನಡೆಯಲಿದೆ.
ಏ.21 ರಂದು ಶುಕ್ರವಾರ ವೈಶಾಖ ಶುಕ್ಲ ಪಾಡ್ಯ ಬೆಳಿಗ್ಗೆ ಶ್ರೀಮಹಾಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ ಉತ್ಸವ, ಸಂಕಲ್ಪ ಋತ್ವಿಗ್ವರ್ಣನೆ, ಆಭರಣ ಪರಿಗ್ರಹ, ಅಗ್ನೋತ್ತಾರಣಪೂರ್ವಕ ಶುದ್ಧಿ, ಅಥರ್ವ ಶೀರ್ಷ ಹವನ, ಸತ್ಯ ಗಣಪತಿ ಕಥೆ, ಮಹಾಮಂಗಳಾರತಿ, ವೇ.ಮೂ.ವಿ. ಗಣಪತಿ ಭಟ್ಟ ಕಿಬ್ಬಳ್ಳಿ ಇವರಿಂದ ಆಶೀರ್ವಚನ ನಂತರ ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಾಯಂಕಾಲ ವಾಸ್ತು ರಾಕ್ಷೋಘ್ನ ಹೋಮ, ಬಲಿ, ಕಲಶ ಸ್ಥಾಪನೆ ಪೂಜೆ, ಅಧಿವಾಸ ನಡೆಯುವುದು. ಸಾಯಂಕಾಲ 6 ರಿಂದ 8 ಗಂಟೆಯವರೆಗೆ ಭಜನೆ, ರಾತ್ರಿ 8 ರಿಂದ 10 ಗಂಟೆ ಶಾಲಾ ಮಕ್ಕಳಿಂದ ಕಾರ್ಯಕ್ರಮ, ನಂತರ ತುಳಸಿ ಹೆಗಡೆ ಇವರಿಂದ ಯಕ್ಷ ನೃತ್ಯ ರೂಪಕ ಆಯೋಜಿಸಲಾಗಿದೆ.
ಏ.22 ರಂದು ಶನಿವಾರ ವೈಶಾಖ ಶುಕ್ಲ ಬಿದಿಗೆ & ತದಿಗೆ ಶ್ರೀದೇವರ ವರ್ಧಂತಿ ಉತ್ಸವ, ಕಲಾವೃದ್ಧಿ ಹೋಮ, ಸತ್ಯನಾರಾಯಣ ಕಥೆ, ಮಹಾಪೂಜೆ, ವೇ.ಮೂ.ವಿ. ಕುಮಾರ ಭಟ್ಟ ಕೊಳಗಿಬೀಸ್ ಇವರಿಂದ ಆಶೀರ್ವಚನ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ, ರಾಜೋಪಚಾರ ಸೇವೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯುವವು. ಸಾಯಂಕಾಲ 6 ರಿಂದ 8 ಗಂಟೆಯವರೆಗೆ ಭಜನೆ, ರಾತ್ರಿ 8 ರಿಂದ 10 ಗಂಟೆವರೆಗೆ ಶಾಲಾ ಮಕ್ಕಳಿಂದ ಕಾರ್ಯಕ್ರಮ, ನಂತರ ಮೂರು ಮುತ್ತುಗಳು ನಾಟಕ ಪ್ರದರ್ಶನ ನಡೆಯಲಿದೆ.
ಏ.23 ರಂದು ರವಿವಾರ ವೈಶಾಖ ಶುಕ್ಲ ಚತುರ್ಥಿ ಬೆಳಿಗ್ಗೆ ಗಣಹವನ, ಅಥರ್ವ ಶೀರ್ಷ ಹೋಮ, ಪೂರ್ಣಾಹುತಿ, ಮಹಾಪೂಜೆ, ವೇ.ಮೂ.ವಿ. ಶ್ರೀನಿವಾಸ ಭಟ್ಟ ಮಂಜುಗುಣಿ ಇವರಿಂದ ಆಶೀರ್ವಚನ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಶ್ರೀದೇವರ ಪಲ್ಲಕ್ಕಿ ಗ್ರಾಮೋತ್ಸವ ನಡೆಯಲಿದೆ. ಸಾಯಂಕಾಲ 6 ರಿಂದ 8 ಗಂಟೆಯವರೆಗೆ ಭಜನೆ, ರಾತ್ರಿ 8 ರಿಂದ 10 ಗಂಟೆ ಶಾಲಾ ಮಕ್ಕಳಿಂದ ಕಾರ್ಯಕ್ರಮ, ನಂತರ ಝೇಂಕಾರ ಮೆಲೋಡಿಸ್ ಭಟ್ಕಳ ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ, ಎಂದು ನೀಲೇಕಣಿ ಶ್ರೀಮಹಾಗಣಪತಿ ಸೇವಾ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.