Slide
Slide
Slide
previous arrow
next arrow

ಶರಾವತಿ ಸೇತುವೆಯಿಂದ ನದಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ: ಯುವತಿಯ ಶವ ಪತ್ತೆ

300x250 AD

ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲಿಂದ ಇಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾತ್ರಿ‌ ವೇಳೆ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಇಬ್ಬರು ಸೇತುವೆ ಮೇಲಿಂದ ನದಿಗೆ ಹಾರಿದ್ದು, ತುಮಕೂರು ಮೂಲದ‌ ಪ್ರೇಮಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶರಾವತಿ ನದಿಗೆ ಹೊಂದಿಕೊoಡಿರುವ ಟೊಂಕ ಸಮೀಪ ಯುವತಿಯ ಮೃತ ದೇಹ ಸಿಕ್ಕಿದ್ದು, ಇನ್ನೊಬ್ಬರ ಪತ್ತೆ ಕಾರ್ಯ ಮುಂದುವರೆದಿದೆ.

ಸೇತುವೆ ಪಕ್ಕ ಇಬ್ಬರ ಚಪ್ಪಲಿ ಹಾಗೂ ಬ್ಯಾಗ್, ಬಸ್ ಪ್ರಯಾಣದ ಟಿಕೇಟ್ ಪತ್ತೆ ಆಗಿವೆ. ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಸ್ಥಳಕ್ಕೆ ಹೊನ್ನಾವರ ಸಿ.ಪಿ.ಐ. ಮಂಜುನಾಥ ಇ.ಓ, ಪಿಎಸೈ ಪ್ರವೀಣಕುಮಾರ, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಚರಣೆ ಮುಂದುವರೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top