ಹೊನ್ನಾವರ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂತಹ ಅಪರೂಪದ ಅವಕಾಶವನ್ನು ಭಟ್ಕಳ ಎಜುಕೇಶನ್ ಟ್ರಸ್ಟ್ ತನ್ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಶಿಕ್ಷಕರಲ್ಲಿ ಸೃಜನಶೀಲತೆಯನ್ನು ಬೇಳೆಸುವುದರ ಜೊತೆಗೆ ವಿದ್ಯಾರ್ಥಿಗಳ ಮೇಲೆ ಉತ್ತಮ ಪರಿಣಾಮವನ್ನು ಬೀರುವಲ್ಲಿ ಸಹಕಾರಿಯಾಗುತ್ತದೆ ಎಂದು ಗೋಕರ್ಣದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ವರಿಷ್ಠಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ ಹೇಳಿದರು.
ಅವರು ಭಟ್ಕಳ ಎಜುಕೇಶನ್ ಟ್ರಸ್ಟಿನ ಅಂಗ ಸಂಸ್ಥೆಗಳಾದ ದಿ ನ್ಯೂಇಂಗ್ಲೀಷ್ ಪ್ರೌಢಶಾಲೆ, ವಿದ್ಯಾಭಾರತಿಆಂಗ್ಲ ಮಾಧ್ಯಮ ಶಾಲೆ, ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂಇಂಗ್ಲೀಷ್ ಪದವಿ ಪೂರ್ವ ಮಹಾವಿದ್ಯಾಲಯ, ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು, ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಮತ್ತು ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾಕಾರ್ಯಕ್ರಮ “ಸಮ್ಮಿಲನ- 2023” ಅನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಟ್ಕಳ ಎಜುಕೇಶನ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಅರ್. ಜಿ. ಕೊಲ್ಲೆ ಮತ್ತು ಟ್ರಸ್ಟಿ ಮ್ಯಾನೇಜರ್‌ರಾಜೇಶ ನಾಯಕ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.ಭಟ್ಕಳ ಎಜುಕೇಶನ್ ಟ್ರಸ್ಟಿನ ಚೇರಮೆನ್‌ಡಾ.ಸುರೇಶ ನಾಯಕಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗದ ವೀರಾಗ್ರಣಿ, ಪುರುಷ ವಿಭಾಗದ ವೀರಾಗ್ರಣಿ ಮತ್ತು ಸಮಗ್ರ ವೀರಾಗ್ರಣಿಯನ್ನು ದಿ ನ್ಯೂಇಂಗ್ಲೀಷ್ ಪಿ ಯುಕಾಲೇಜಿನ ಸಿಬ್ಬಂದಿಗಳು ಪಡೆದುಕೊಂಡರು. ದಿ ನ್ಯೂ ಇಂಗ್ಲೀಷ್ ಪಿ ಯುಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ವಿ. ಶಾನಭಾಗ ಸ್ವಾಗತಿಸಿದರು, ಶ್ರೀ ಗುರು ಸುಧಿಂದ್ರ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ವಂದಿಸಿದರು. ದಿ ನ್ಯೂಇಂಗ್ಲೀಷ್ ಪಿಯು ಕಾಲೇಜಿನ ಉಪನ್ಯಾಸಕರಾದ ಶಿವಾನಂದ ಭಟ್ ಹಾಗೂ ವಿಶ್ವಾಸ ಪ್ರಭು ನಿರೂಪಿಸಿದು. ನಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿ0ದ ಮನರಂಜನಾ ಕಾರ್ಯಕ್ರಮಗಳು ನಡೆದವು.