ಮುಂಡಗೋಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ಇಂದೂರು ಗ್ರಾಮ ಪಂಚಾಯತ್‌ನ ರಾಜಪ್ಪನಕಟ್ಟಿ ಕೆರೆ ಸಮಗ್ರ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗಿದೆ.
ಸುಮಾರು 7ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಮಗ್ರ ಅಭಿವೃದ್ದಿ ಕೆರೆಗೆ ದಂಡೆಗೆ ಕಲ್ಲಿನ ಹಾಸು(ಪಿಚ್ಚಿಂಗ್), ಹಾಗೂ ಹೊಲಗದ್ದೆಗಳಿಗೆ ನೀರು ಪೂರೈಕೆಗೆ ಕಾಲುವೆ ನಿರ್ಮಾಣ, ಕೆರೆಗೆ ಔಟ್ಲೇಟ್ ಹಾಗೂ ಇನ್ ಲೇಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆರೆ ಹೂಳೆತ್ತುವ ಕಾರ್ಯ ಮುಕ್ತಾಯಗೊಂಡಿದೆ.
ಪAಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಮಾನ್ವಿತಾ ನಾಯಕ ಮಾತನಾಡಿ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ದಿಗೆ ಸಂಬ0ಧಿಸಿದ0ತೆ ಸದ್ಯ 3 ಕೆರೆಗಳ ಕಾಮಗಾರಿ ಆರಂಭವಾಗಿದ್ದು ಕೆರೆಗಳ ಸಮಗ್ರ ಅಭಿವೃದ್ದಿ ಕೈಗೊಳ್ಳಲಾಗುತ್ತಿವೆ. ಇಲ್ಲಿನ ರೈತರಿಗೆ ಅಗತ್ಯವಿರುವ ನೀರಿನ ಮೂಲಗಳ ಭದ್ರತೆಗೆ ನರೇಗಾ ಯೋಜನೆಯ ಕಾಮಗಾರಿಗಳು ಸಹಾಯವಾಗುತ್ತಿದೆ ಎಂದರು.
ಇನ್ನೂ ಇದೇ ವೇಳೆ ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಭಾರತದ ಪ್ರಜಾಪ್ರಭುತ್ವ ಕಾಪಾಡಲು ಸಜ್ಜಾಗೋಣ ಎಂದು ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಬಿಎಫ್‌ಟಿ ಮಂಜುನಾಥ ಪೂಜಾರ, ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಧರ ಮಾಡಲಗಿ, ಜಿಕೆಎಮ್ ಶೀವಲೀಲಾ ಇತರರು ಹಾಜರಿದ್ದರು.