ದಾಂಡೇಲಿ: ತಾಲೂಕಿನ ಕುಳಗಿ ಗ್ರಾಮದ ಕುಳಗಿ –ಅಂಬಿಕಾನಗರ ರಸ್ತೆಯಲ್ಲಿ ಬರುವ ಕುಳಗಿ ಕೆರೆಯ ಹತ್ತಿರ ಶನಿವಾರ ನಸುಕಿನ ವೇಳೆಯಲ್ಲಿ ಮೊಸಳೆಯಿಂದು ಪ್ರತ್ಯಕ್ಷವಾಗಿದೆ.
ಈ ಸಂದರ್ಭದಲ್ಲಿ ವಾಯುವಿಹಾರಕ್ಕೆಂದು ಹೋಗುತ್ತಿದ್ದ ಸ್ಥಳೀಯ ಜನತೆ ಆತಂಕಗೊoಡರೂ, ಸ್ಥಳೀಯರಾದ ಟಿ.ಎಸ್.ಬಾಲಮಣಿ ಮತ್ತು ಅಂಬಿಕಾನಗರ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷೆ ಅಶ್ವಿನಿ ಬಾಲಮಣಿ ಹಗೂ ಬಾಲ ಗಾಯಕಿ ಸಂಜನಾ ಅವರು ಸ್ಥಳೀಯರನ್ನು ಸಮಾಧಾನಪಡಿಸಿದ್ದಾರೆ.
ಮೊಸಳೆ ಅದು ಆಹಾರವನ್ನರಸಿ ಬಂದಿರುತ್ತದೆ. ನಾವಾದಕ್ಕೆ ಯಾವುದೇ ತೊಂದರೆ ಕೊಡಬಾರದು. ಅದು ಒಂದು ಜೀವ. ಅದರ ರಕ್ಷಣೆ ನಮ್ಮ ಜವಾಬ್ದಾರಿ. ಪ್ರತಿಯೊಂದಕ್ಕೂ ಅರಣ್ಯ ಇಲಾಖೆಯನ್ನು ದೂರುವುದು ಸರಿಯಲ್ಲ. ಅರಣ್ಯ ಇಲಾಖೆಯವರು ಸಾಧ್ಯವಾದಷ್ಟು ಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ನಾವು ಮಾಡುವ ತಪ್ಪಿಗೆ ಅರಣ್ಯ ಇಲಾಖೆಯನ್ನು ವಿರೋಧಿಸಬಾರದು. ನಾವು ಜವಾಬ್ದಾರಿಯನ್ನರಿತು ನಡೆದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ತಿಳುವಳಿಕೆಯನ್ನು ಮೂಡಿಸಿದರು.
ಆನಂತರ ಸ್ಥಳೀಯರು ತಮ್ಮ ಪಾಡಿಗೆ ತಾವು ಹೋದರು. ಮೊಳಸೆಯು ಯಾರ ಭಯವಿಲ್ಲದೇ ತನ್ನ ಪಾಡಿಗೆ ತಾನು ಹೋಗಿ ಬಿಟ್ಟಿತು. ಮೊಳಸೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿದು ಕುಳಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ಮೊಸಳೆ ಹಿಡಿಯುವ ಕಾರ್ಯಚರಣೆಗೆ ಮುಂದಾಗಿದೆ.