Slide
Slide
Slide
previous arrow
next arrow

ಬಾವಿಯಲ್ಲಿ ಬಿದ್ದ ಆಕಳ ರಕ್ಷಣೆ

300x250 AD

ಹೊನ್ನಾವರ: ತಾಲೂಕಿನ ಮಂಕಿ ಬಳಿ ಬಾವಿಯೊಂದರಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದ್ದಾರೆ.

ಸುಮಾರು 15 ಅಡಿ ಆಳ 10 ಅಡಿ ನೀರಿರುವ ತೆರೆದ ಬಾವಿಯಲ್ಲಿ ಬಿದ್ದಿರುವ ಆಕಳನ್ನು ಹಗ್ಗ ಮತ್ತು ಇತರೆ ಸುರಕ್ಷಿತ ಸಲಕರಣೆ ಬಳಸಿ ಸಾರ್ವಜನಿಕರ ಸಹಕಾರದ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

300x250 AD

ಕಾರ್ಯಚರಣೆಯಲ್ಲಿ ಜಯಾನಂದ ಪಟಗಾರ ಹಾಗೂ ಅಗ್ನಿಶಾಮಕ ಸಿಬ್ಬಂದಿ ನಾಗೇಶ ಪೂಜಾರಿ, ಬಸವರಾಜ ಮಂಗೋಜಿ, ವಿನಾಯಕ ಭಂಡಾರಿ, ಅಭಿಷೇಕ ನಾಯ್ಕ, ವಿಶ್ವಾಸ ಎಸ್. ಹಾಗೂ ರಾಜು ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top