ಕುಮಟಾ: ತಾಲೂಕಿನ ದೀವಗಿಯ ತಂಡ್ರಕುಳಿಯಲ್ಲಿ ಶ್ರೀಮಹಾಸತಿ, ನಾಗದೇವತೆ ಮತ್ತು ಪರಿವಾರ ದೇವರುಗಳ ವರ್ಧಂತಿ ಉತ್ಸವದ ನಿಮಿತ್ತ ಅಂಬಿಗ ಸಮಾಜದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಿತು.
ಶ್ರೀ ಶಿವಗಂಗಾ ಅಭಿವೃದ್ದಿ ಸಂಘದ ನೇತೃತ್ವದಲ್ಲಿ ಶ್ರೀಮಹಾಸತಿ, ಚೌಡೇಶ್ವರಿ, ನಾಗದೇವತೆ ಹಾಗೂ ಪರಿವಾರ ದೇವರುಗಳ ವರ್ಧಂತಿ ಉತ್ಸವ ಅದ್ಧೂರಿಯಾಗಿ ಸಂಪನ್ನಗೊ0ಡಿದ್ದು, ಉತ್ಸವದ ನಿಮಿತ್ತ ಅಂಬಿಗ ಸಮಾಜದವರಿಗಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಆರ್.ಕೆ ಅಂಬಿಗ ಉದ್ಘಾಟಿಸಿ ಮಾತನಾಡಿದರು.
ಪರಮಾತ್ಮನ ನೆನಪಿನೊಂದಿಗೆ ಆತನ ಜೊತೆಗೆ ಸಂಬ0ಧ ಜೋಡಿಸಿದಾಗ ನಮ್ಮಲ್ಲಿರುವ ನಿಜಗುಣಗಳು ಜಾಗೃತವಾಗಿ ಸುಖ, ಶಾಂತಿ, ಸಮಾಧಾನ ದೊರಕುತ್ತದೆ. ಸದಾ ಪ್ರತಿಯೊಬ್ಬರ ಬಗ್ಗೆಯೂ ಒಳಿತನ್ನು ಬಯಸುವ ಜ್ಞಾನದಿಂದಲೇ ನಮ್ಮ ಜೀವನ ಸುಂದರವಾಗಲು ಸಾಧ್ಯ ಎಂದರು.
ಶ್ರೀಶಿವಗ0 ಗಾ ಅಭಿವೃಧ್ದಿ ಸಂಘದ ಅಧ್ಯಕ್ಷ ರಾಮ ಹಮ್ಮಯ್ಯ ಅಂಬಿಗ ಅಧ್ಯಕ್ಷತೆ ವಹಿಸಿದ್ದರು. ರವಿ ಅಂಬಿಗ ಧಾರೇಶ್ವರ ಕಬಡ್ಡಿ ಅಂಕಣವನ್ನು ಉದ್ಘಾಟಿಸಿದರು. ರ್ವೆಲ್ವೆ ಉದ್ಯೋಗಿ ಪ್ರಭಾಕರ ಹೆಗಡೆಕರ್ ಟ್ರೋಫಿ ಅನಾವರಣಗೊಳಿಸಿದರು. ಮುಖಂಡರಾದ ಗಣಪಯ್ಯ ಅಂಬಿಗ, ತಂಡ್ರಕುಳಿ ಸ.ಕಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗವೇಣಿ ಅಂಬಿಗ ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾವಳಿಯಲ್ಲಿ ದೀವಗಿಯ ಗಂಗಾಮಾತಾ ತಂಡ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಅತಿಥೇಯ ತಂಡ್ರಕುಳಿಯ ಸನ್ಯಾಸಿ ಎ ತಂಡ ಗಿಟ್ಟಿಸಿಕೊಂಡಿತು. ಹೊನ್ನಾವರ ಕಳಸನಮೂಟೆಯ ಎಸ್ಎನ್ಬಿ ತೃತೀಯ ಬಹುಮಾನ ಪಡೆದುಕೊಂಡರೆ ತಂಡ್ರಕುಳಿಯ ಸನ್ಯಾಸಿ ಬಿ ಚತುರ್ಥ ಬಹುಮಾನಕ್ಕೆ ಭಾಜನವಾಯಿತು. ವಿಜೇತರಿಗೆ ಸಾಮಾಜಿಕ ಕಾರ್ಯಕರ್ತ ಆರ್.ಕೆ.ಅಂಬಿಗ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಮಾದೇವ ಬಿ ಅಂಬಿಗ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ರಾಘವೇಂದ್ರ ಎ ಅಂಬಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಗ್ರಾಮದ ಮಕ್ಕಳಿಂದ ನಡೆದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.