ದಾಂಡೇ : ನಗರದ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ನಡೆದ ಭಗವಾನ್ ಶ್ರೀಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ನಗರದ ಕವಯತ್ರಿ, ಗಾಯಕಿ ಹಾಗೂ ಜನತಾ ವಿದ್ಯಾಲಯ ಪ್ರೌಢಶಾಲೆಯ ಸಹ ಶಿಕ್ಷಕಿ ಪದ್ಮಶ್ರೀ ಎಸ್.ಜೈನ್ ಅವರು ತಮ್ಮ ಸ್ವರಚಿತ ಹಾಡಿನ ಗಾಯನ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.
ಈಗಾಗಲೆ 80ಕ್ಕೂ ಅಧಿಕ ಕವನಗಳನ್ನು ರಚಿಸಿರುವ ಪದ್ಮಶ್ರೀ.ಎಸ್.ಜೈನ್ ಅವರಿಗೆ ಅವರ ವಿವಿಧ ಕವನಗಳಿಗೆ 20 ಕ್ಕೂ ಅಧಿಕ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ವಿದ್ಯಾರ್ಥಿ ದೆಸೆಯಲ್ಲಿಯೆ ರಾಜ್ಯಮಟ್ಟದ ಕ್ರೀಡಾಪಟುವಾಗಿ, ಗಾಯಕಿಯಾಗಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಪದ್ಮಶ್ರೀ, ಭಗವಾನ್ ಶ್ರೀಮಹಾವೀರರ ಕುರಿತಾಗಿ ರಚಿಸಿದ ಹಾಡಿಗೆ ರಾಗ ಸಂಯೋಜನೆಯನ್ನು ನಗರದ ಭಾರತೀಯ ಸಂಗೀತ ವಿದ್ಯಾಲಯದ ಪಂ.ಚ0ದ್ರಶೇಖರ್ ಎಸ್. ಅವರು ಮಾಡಿದ್ದರು.
ಗಾಯನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಅವರ ಹಾಡಿಗೆ ಪಂ.ಚ0ದ್ರಶೇಖರ್ ಎಸ್. ಅವರ ನೇತೃತ್ವದ ತಂಡ ಹಿನ್ನಲೆ ಸಹಕಾರವನ್ನು ನೀಡಿ ಗಮನ ಸೆಳೆಯಿತು.