ಯಲ್ಲಾಪುರ: ಗೀತಾ ಪರಿವಾರ ಬೆಂಗಳೂರು ನೆಡೆಸುವ ಭಗವದ್ಗೀತಾ ಆನ್‌ಲೈನ ಪರೀಕ್ಷೆಯಲ್ಲಿ ತಾಲೂಕಿನ ಆನಗೋಡ ಅಗ್ಗಾಸಿಮನೆಯ ನೇತ್ರಾವತಿ ಭಟ್ ಇವರು 600 ಅಂಕದ ಪರೀಕ್ಷೆಯಲ್ಲಿ 598 ಅಂಕ ಪಡೆದು ಬಂಗಾರದ ಪದಕ ಗಳಿಸಿದ್ದಾರೆ.
ಗೀತಾ ಪರಿವಾರದ ಸಂಸ್ಥಾಪಕರಾದ ಪೂಜ್ಯ ಗೋವಿಂದ ದೇವಗಿರೀಜಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಆಶು ಗೋಯಲ್ಜಿ, ನಿರ್ದೇಶಕರಾದ ಡಾ,ಸಂಜಯ ಮಾಲ್ಪಾಣಿಜಿ ಸಾರಥ್ಯದಲ್ಲಿ ನಾಲ್ಕು ವಿಭಾಗದಲ್ಲಿ ಭಗವದ್ಗೀತಾ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ನೇತ್ರಾವತಿ ಭಟ್ಟ ಇವರು ಗೀತಾ ಗುಂಜನ ಎರಡು ಅದ್ಯಾಯ, ಗೀತಾ ಜಿಜ್ಞಾಸು ಮೂರು ಅದ್ಯಾಯ, ಕಂಠಸ್ಥಿಕರಣ 100 ಅಂಕದ ಪರೀಕ್ಷೆಯಲ್ಲಿ 100 ಅಂಕ ಪಡೆದು, ಗೀತಾ ಪಾಠಕ್ 6 ಅಧ್ಯಾಯಗಳ ಕಂಠಸ್ಥೀಕರಣ, 200 ಅಂಕ ಪರೀಕ್ಷೆಯಲ್ಲಿ 199 ಅಂಕ ಗಳಿಸಿದ್ದಾರೆ.
ಗೀತಾ ಪತಿಕ್ ಹನ್ನೆರಡು ಅದ್ಯಾಯಗಳ ಕಂಠಸ್ಥೀಕರಣ 400 ಅಂಕದ ಪರೀಕ್ಷೆಯಲ್ಲಿ 398 ಅಂಕಗಳಿಸಿ ತೇರ್ಗಡೆ ಹೊಂದಿದ ನಂತರ ಗೀತಾ ವ್ರತಿ ಹದಿನಂಟು ಅದ್ಯಾಯಗಳನ್ನು ಕಂಠ ಪಾಠ ಮಾಡಿ 600 ಅಂಕದ ಪರೀಕ್ಷೆಯಲ್ಲಿ 598 ಅಂಕ ಪಡೆದು ಬಂಗಾರದ ಪದಕ ಗಳಿಸಿದ್ದಾರೆ. ಇವರ ಸಾಧನೆಗೆ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅದ್ಯಕ್ಷ ಜಿ ಎನ್ ಹೆಗಡೆ ಹಿರೆಸರ, ಉಪಾಧ್ಯಕ್ಷರಾದ ಎಸ್ ಎಸ್ ಭಟ್ಟ ಅಖಿಲ ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷರಾದ ಶಶೀಭೂಷಣ ಹೆಗಡೆ, ನಿರ್ದೇಶಕರಾದ ಶ್ರೀಪಾದ ರೈಸದ, ಶ್ರೀಪಾದ, ಕೆ.ಎಸ್.ಭಟ್ಟ ಆನಗೋಡ, ಪ್ರಸಾದ ಹೆಗಡೆ, ನಾರಾಯಣ ಭಟ್ ಕರಿಕಲ್, ಗಣೇಶ ಹೊನ್ನಾವರ ಶುಭ ಹಾರೈಸಿದ್ದಾರೆ.