ದಾಂಡೇಲಿ: ಸಮೀಪದ ಹಾಲಮಡ್ಡಿಯಿಂದ ಶ್ರೀದಾಂಡೇಲಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಪ್ರತ್ಯಕ್ಷವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸುರಕ್ಷಿತವಾಗಿ ಹಿಡಿದು ರಕ್ಷಿಸಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಸಿ. ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಠ್ ಅವರ ಮಾರ್ಗದರ್ಶನದಡಿ ವಲಯಾರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಮೊಸಳೆ ಹಿಡಿಯುವ ರಕ್ಷಣಾ ತಂಡದ ಸದಸ್ಯರುಗಳಾದ ಸಂದೀಪ್ ಗೌಡ, ಚಂದ್ರಕಾಂತ ಮಿರಾಶಿ, ರಫೀಕ್, ಅಜಯ್, ಶ್ರೀಶೈಲ್, ಸಾಗರ್ ಮತ್ತು ಗೋವಿಂದ ಅವರುಗಳು ಸುರಕ್ಷಿತವಾಗಿ ಸೋಮವಾರ ತಡರಾತ್ರಿ ಮೊಸಳೆಯನ್ನು ಹಿಡಿದು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ತಡವರಿಯದ ಸ್ಪಂದನೆ ಮತ್ತು ಸಾಹಸಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.