Slide
Slide
Slide
previous arrow
next arrow

ಗೋಕರ್ಣ ಸೀಮೆಯಲ್ಲಿ ನಾಮಧಾರಿಗಳ ಸುಗ್ಗಿಯ ಸೊಬಗು

300x250 AD

ಗೋಕರ್ಣ: ಗಂಗಾವಳಿಯಿಂದ ಅಘನಾಶಿನಿಯವರೆಗೆ ಸುಗ್ಗಿಹಬ್ಬವನ್ನು ಇತರ ಕಡೆಗಳಲ್ಲಿ ಮಾಡುವ ಸಂದರ್ಭದಲ್ಲಿ ಮಾಡದೇ ಹಿಂದೂ ಸಂಪ್ರದಾಯದಂತೆ ಯುಗಾದಿಯನ್ನು ಹೊಸವರ್ಷವೆಂದು ಆಚರಿಸಿದ ನಂತರ ಮೊದಲ ಹಬ್ಬವಾಗಿ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ‘ಹಿರಿ ಸುಗ್ಗಿ’ ಎಂದು ಕರೆಯುತ್ತಾರೆ.
ಗೋಕರ್ಣ ಸೀಮೆಯಲ್ಲಿ ಹಾಲಕ್ಕಿ, ನಾಮಧಾರಿ, ಖಾರ್ವಿ, ಪಟಗಾರ ಸಮಾಜದವರು ಸುಗ್ಗಿಯನ್ನು ಆಚರಿಸುತ್ತ ಬಂದಿದ್ದರೂ ಕೂಡ ನಂತರದ ದಿನಗಳಲ್ಲಿ ಹಾಲಕ್ಕಿ ಮತ್ತು ನಾಮಧಾರಿಗಳ ಸುಗ್ಗಿ ಮಾತ್ರ ಉಳಿದು ಇತರೆ ಸಮಾಜದ ಸುಗ್ಗಿಗಳು ನಶಿಸಿದೆ. ಹೀಗಾಗಿ ಇಲ್ಲಿ ಸುಗ್ಗಿ ಹಬ್ಬವನ್ನು ನೋಡುವುದೇ ವಿಶೇಷವಾಗಿದೆ.
ನಾಮಧಾರಿ ಸಮಾಜದಿಂದ ಹನೇಹಳ್ಳಿ-ಬಂಕಿಕೊಡ್ಲ ಮತ್ತು ಗಂಗಾವಳಿಯಲ್ಲಿ ಮಾತ್ರ ಆಚರಿಸಲಾಗುತ್ತದೆ. ಆದರೆ ಹಾಲಕ್ಕಿಗಳ ಸುಗ್ಗಿ ಪ್ರತಿವರ್ಷ ನಡೆದರೆ ನಾಮಧಾರಿಗಳ ಸುಗ್ಗಿ 5 ವರ್ಷಕ್ಕೊಮ್ಮೆ ನಡೆಯುತ್ತದೆ. ಸುಮಾರು ಒಂದು ವಾರಗಳ ವರೆಗೆ ನಡೆಯುವ ಈ ಸುಗ್ಗಿ ತಂಡಗಳು ದೇವರ ಎದುರು ಹಾಗೂ ಹಕ್ಕುದಾರರ ಮನೆಗಳಲ್ಲಿ ಕುಣಿದು ನಂತರ ವಿವಿಧ ಗ್ರಾಮಗಳಿಗೆ ತೆರಳಿ ಸುಗ್ಗಿ ಪ್ರದರ್ಶನ ನೀಡುತ್ತಾರೆ.
ವಿಶೇಷ ಅಲಂಕಾರಗಳಿಂದ ಸಿದ್ಧಗೊಂಡ ತುರಾಯಿಗಳೊಂದಿಗೆ ವಿಶೇಷ ವೇಷ-ಭೂಷಣಗಳಿಂದ ಕಂಗೊಳಿಸುವ ತಂಡದೊಂದಿಗೆ ಕರಡಿ ವೇಷ, ಯಕ್ಷಗಾನದ ವಿವಿಧ ವೇಷಗಳು ಹಾಗೂ ಇನ್ನಿತರ ಪಾತ್ರಗಳನ್ನು ವಿಶೇಷ ಮೆರಗು ನೀಡುತ್ತವೆ. ಹಾಗೆಯೇ ಇವರು ಹಾಡುಗಳು ಕೂಡ ವಿಶೇಷವಾಗಿದೆ. ಇವರ ವಿಶೇಷ ಶೈಲಿಯ ಕೋಲಾಟವಂತೂ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಜಾನಪದ ಹಾಡಿನೊಂದಿಗೆ ಸಾಂಪ್ರಾದಾಯಿಕ ವಾದ್ಯಗಳಾದ ಗುಮಟೆ, ಡೋಲು, ತಾಳ, ಜಾಗಟೆ, ವಾದ್ಯಗಳು ಕೋಲಿನೊಂದಿಗೆ ಮೇಳೈಸುತ್ತವೆ.
ಏ.7 ರಂದು ಸುಗ್ಗಿಹಬ್ಬವು ಸಂಪನ್ನಗೊಳ್ಳಲಿದ್ದು, ಅಂದು ಎರಡು ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ದಿನ ವಿಶೇಷವಾಗಿ ಸುಗ್ಗಿ ಪ್ರದರ್ಶನ ನಡೆಯುತ್ತದೆ. ಇದನ್ನು ನೋಡಲು ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ಆಗಮಿಸುತ್ತಾರೆ. ಇಲ್ಲಿ ವಿಶೇಷವೆಂದರೆ ಈ ಎರಡು ತಂಡದವರು ಚಿಕ್ಕ ಮಕ್ಕಳಿಗೂ ಕೂಡ ಕೋಲಾಟವನ್ನು ಕಲಿಸಿ ಅವರು ಕೂಡ ವಿಶೇಷ ಉಡುಗೆ-ತೊಡುಗೆಯೊಂದಿಗೆ ಕೋಲಾಟ ಮಾಡುತ್ತಾರೆ. ಮುಂದಿನ ಪೀಳಿಗೆಯವರು ಕೂಡ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದು ಎರಡು ತಂಡದ ಹಿರಿಯರ ಆಶಯವಾಗಿದೆ.

300x250 AD
Share This
300x250 AD
300x250 AD
300x250 AD
Back to top