Slide
Slide
Slide
previous arrow
next arrow

11 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ನಾಶ

300x250 AD

ಅಂಕೋಲಾ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 51 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 47 ಕೆಜಿಯಷ್ಟು ಮಾದಕ ವಸ್ತುಗಳನ್ನ ನ್ಯಾಯಾಲಯದ ಅನುಮತಿಯ ಮೇರೆಗೆ ನಾಶಪಡಿಸಲಾಯಿತು.

ತಾಲ್ಲೂಕಿನ ಬೊಗ್ರಿಬೈಲ್‌ನ ಕೆನರಾ ಐ.ಎಮ್.ಎ.(ಯು.ಕೆ) ಕಾನ್ ಗ್ರೀಟ್‌ಮೆಂಟ್ ಫೆಸಿಲಿಟಿ ರವರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ಮಾದಕ ವಸ್ತುಗಳನ್ನ ನಾಶಪಡಿಸಲಾಯಿತು. ಒಂದು ತಿಂಗಳ ಅವಧಿಯಲ್ಲಿ ಉತ್ತರಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟೂ 24 ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿದ್ದು, ಗಾಂಜಾ ಇರಿಸಿಕೊಂಡಿದ್ದಂತಹ ಹತ್ತರಿಂದ ಹನ್ನೆರಡು ಪ್ರಕರಣಗಳು ದಾಖಲಾಗಿದ್ದವು.

300x250 AD

ಈ ನಿಟ್ಟಿನಲ್ಲಿ ಪೊಲೀಸರ ತಂಡವನ್ನು ರೂಪಿಸಿ ಗಾಂಜಾ ಸಾಗಾಟ, ಸೇವನೆ ಮಾಡುವವರ ಮಾಹಿತಿ ಕಲೆಹಾಕಿ ಅಂಥವರನ್ನ ಮಟ್ಟಹಾಕುವ ಕೆಲಸವನ್ನ ಸಿಬ್ಬಂದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮಾದಕ ವಸ್ತು ಸಾಗಾಟದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನ ಎಸ್ಪಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾರವಾರ ಡಿವೈಎಸ್ಪಿ ವ್ಯಾಲೆಂಟೈನ್ ಡಿಸೋಜಾ, ಭಟ್ಕಳ ಡಿವೈಎಸ್ಪಿ ಶ್ರೀಕಾಂತ, ಡಿಸಿಆರ್‌ಬಿ ಡಿವೈಎಸ್ಪಿ ವಿಜಯಪ್ರಸಾದ್ ಹಾಗೂ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ ಹಾಗೂ ಪಿಎಸೈ, ಸಿಬ್ಬಂದಿ ಹಾಜರಿದ್ದರು.

Share This
300x250 AD
300x250 AD
300x250 AD
Back to top