ಸಿದ್ದಾಪುರ: ಕಸಗಳನ್ನು ವಿಂಗಡಣೆ ಮಾಡಿ ಘನತ್ಯಾಜ್ಯ ಘಟಕಗಳಲ್ಲಿ ಸಂಗ್ರಹಿಸಿ ಸಂಸ್ಕರಣೆ ಮಾಡಬೇಕು. ಇದರ ಜವಾಬ್ದಾರಿ ಗ್ರಾಮ ಪಂಚಾಯತಗಳು ತೆಗೆದುಕೊಂಡು ಸ್ವಸಹಾಯ ಸಂಘಗಳ ಮೂಲಕ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಹಯೋಗದಿಂದಿಗೆ ಕಸ ವಿಲೇವಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಬೇಕು. ನಾವುಗಳು ಪರಿಸರ ಸ್ವಚ್ಚವಾಗಿ ಇಡದೇ ಹೋದಲ್ಲಿ ಭವಿಷ್ಯತ್ತಿನಲ್ಲಿ ದೊಡ್ಡ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಪ್ರಕೃತಿಯ ಉಳಿವಿಗಾಗಿ ಹಾಗೂ ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಈಗಿನಿಂದಲೇ ಸ್ವಚ್ಚತೆಯ ಬಗ್ಗೆ ಜಾಗೃತರಾಗಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರೂ.20 ಲಕ್ಷದ ಕೋಲಸಿರ್ಸಿ ಮಾರುತಿನಗರ ರಸ್ತೆ, ರೂ.40 ಲಕ್ಷದ ಕೋಲಸಿರ್ಸಿ ಊರೊಳಗಿನ ರಸ್ತೆ ಹಾಗೂ ಕೋಲಸಿರ್ಸಿ ಮತ್ತು ಬಿದ್ರಕಾನ ಪಂಚಾಯತಗಳ ಜಂಟಿಯಾಗಿ ನಿರ್ಮಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅದೇ ರೀತಿಯಾಗಿ ಅಭಿವೃದ್ಧಿಯಲ್ಲಿ ಸಿದ್ದಾಪುರ ತಾಲೂಕು ಯಾವತ್ತಿಗೂ ಕಡೆಗಣಿಸಿರುವುದಿಲ್ಲ. ಪ್ರತಿ ಪಂಚಾಯತಗಳಿಗೂ ಸಾಕಷ್ಟು ಅನುದಾನ ತಂದು ರಸ್ತೆ, ಸೇತುವೆ, ಕಾಲುಸಂಕ ಹೀಗೆ ಹತ್ತು ಹಲವಾರು ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೋಲಸಿರ್ಸಿ ಪಂಚಾಯತಿ ಅಧ್ಯಕ್ಷ ಮಮತಾ ಮಡಿವಾಳ, ಉಪಾಧ್ಯಕ್ಷ ವಿನಾಯಕ ಕೆ.ಆರ್., ಬಿದ್ರಕಾನ ಪಂ. ಅಧ್ಯಕ್ಷ ಮಧು ಭಟ್ಟ, ಉಪಾಧ್ಯಕ್ಷರಾದ ಶ್ಯಾಮಲಾ ಗೌಡ, ಸದಸ್ಯರಾದ ವಿನಯ ಗೌಡರ, ಗೋವಿಂದ ನಾಯ್ಕ, ಆನಂದ ಮಡಿವಾಳ, ಮಾಬ್ಲೇಶ್ವರ ನಾಯ್ಕ, ಹೇಮಾ ಗೌಡರ್, ವೀಣಾ ಕಾನಡೆ, ಗಣಪತಿ ಗೊಂಡ, ಸುಮನಾ ನಾಯ್ಕ, ಶ್ವೇತಾ ನಾಯ್ಕ, ದುರ್ಗಮ್ಮ ಮೇದಾರ, ಪಟ್ಟಣ ಪಂಚಾಯತ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ, ಪ್ರಮುಖರಾದ ವಾಸುದೇವ ನಾಯ್ಕ, ಮಾದೇವ ನಾಯ್ಕ, ಗೋಪಾಲ ನಾಯ್ಕ, ಈಶ್ವರ ರಾಮಾ ನಾಯ್ಕ ಎಇಇ ಕುಶುಮಾ ಹೆಗಡೆ, ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ, ಸಹನಾ ನಾಯ್ಕ ಊರ ನಾಗರೀಕರು ಇದ್ದರು.