ಭಟ್ಕಳ: ಕಿತ್ರೆಯ ಶ್ರೀಕ್ಷೇತ್ರ ದೇವಿಮನೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.18ರಂದು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಹಿಂದುಸ್ಥಾನಿ ಸಂಗೀತಗಾರ ದಿ.ಅನಂತ ಹೆಬ್ಬಾರ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ‘ಅನಂತ ಗಾನನಮನ’ ಏರ್ಪಡಿಸಲಾಗಿದೆ.
ಶ್ರೀಧರ ಹೆಗಡೆ ಕಲಭಾಗ, ಮಹೇಶ ಮಹಾಲೆ ಅಂಕೋಲಾ, ಗಣಪತಿ ಹೆಗಡೆ ಯಲ್ಲಾಪುರ, ಸತೀಶ ಭಟ್ ಮಾಳ್ಕೊಪ್ಪ, ಶಿವಾನಂದ ಭಟ್ ಹಡಿನಬಾಳ, ಲಕ್ಷ್ಮೀ ಹೆಗಡೆ ಬಗ್ಗೋಣ, ವಿಘ್ನೇಶ್ವರ ಭಟ್ಟ ಖರ್ವಾ, ಪ್ರಕಾಶ ಹೆಗಡೆ ಯಡಳ್ಳಿ, ಜನಾರ್ಧನ ಹೆಗಡೆ , ಸುಬ್ರಹ್ಮಣ್ಯ ಹೆಗಡೆ ದೊಡ್ಡೀಡಿ, ದಿವಾಕರ ಹೆಬ್ಬಾರ ಶೀನು ಮಹಾಲೆ , ಪರಮೇಶ್ವರ ಹೆಗಡೆ ಹಾಗೂ ಅನಂತ ಹೆಬ್ಬಾರ ಶಿಷ್ಯವೃಂದ ಗಾಯನದ ಮೂಲಕ ದಿ. ಅನಂತ ಹೆಬ್ಬಾರರಿಗೆ ನುಡಿನಮನ ಸಲ್ಲಿಸಲಿದ್ದಾರೆ. ಗೋಪಾಲಕೃಷ್ಣ ಹೆಗಡೆ,ಶೇಷಾದ್ರಿ ಅಯ್ಯಂಗಾರ, ಎಸ್ ಜಿ ಹೆಗಡೆ ಕೆಪ್ಪೆಕರೆ, ಗುರುರಾಜ ಹೆಗಡೆ ಆಡುಕಳ, ಮಧು ಕುಡಾಲ್ಕರ್, ಬಾಲಚಂದ್ರ ಹೆಬ್ಬಾರ,ಸಂತೋಷ ಚಂದಾವರರ್ಕರ, ರಾಘವೇಂದ್ರ ಹೆಗಡೆ ತಬಲಾಸಾಥ್ ನೀಡಿದರೆ, ಪ್ರಕಾಶ ಹೆಗಡೆ ಯಳ್ಳಿ, ಗೌರೀಶ ಯಾಜಿ ಕೂಜಳ್ಳಿ, ಸತೀಶ ಭಟ್ಟ ಹೆಗ್ಗಾರ, ಅಜಯ ಹೆಗಡೆ ಶಿರಸಿ, ಹರಿಶ್ಚಂದ್ರ ನಾಯ್ಕ , ನಾಗರಾಜ ಹೆಗಡೆ, ಎಂ.ಎಸ್.ಹೆಗಡೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಿಮನೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ್ ವಹಿಸಲಿದ್ದು, ಪರಮೇಶ್ವರ ಹೆಗಡೆ ಕಲಭಾಗ, ಡಾ.ಅಶೋಕ ಹುಗ್ಗಣ್ಣವರ್ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋಪಾಲ ಹೆಗಡೆ ಕಲಭಾಗ, ನಳೀನಕುಮಾರ ಶೆಟ್ಟಿ, ಕೇದಾರ ಕೊಲ್ಲೆ, ಗಣಪತಿ ಹೆಗಡೆ ಯಲ್ಲಾಪುರ, ನಾರಾಯಣ ಹೆಬ್ಬಾರ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಅನಂತ ಹೆಬ್ಬಾರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅನಂತ ಗಾನ ನಮನ ಯಶಸ್ವಿಗೊಳಿಸುವಂತೆ ಸಂಘಟಕರು ಕೋರಿದ್ದಾರೆ.