ಸಿದ್ದಾಪುರ: ಸ್ಥಳೀಯ ಸ್ಪಂದನ ಸೇವಾ ಸಂಸ್ಥೆ ಭಾವ ಸಂಗಮ ಎನ್ನುವ ಕಥೆ ಪುಸ್ತಕಗಳ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಮಾ.4ರ ಮಧ್ಯಾಹ್ನ 3.30ರಿಂದ ಪಟ್ಟಣದ ಸಾಯಿನಗರದ ನಾಗಶ್ರೀ ನಿಲಯದಲ್ಲಿ ಹಮ್ಮಿಕೊಂಡಿದೆ.
ಹಿರಿಯ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಹಿರಿಯ ಸಂಗೀತ ಶಿಕ್ಷಕಿ ಶಾಂತಾ ದಯಾನಂದ ನಿಲೇಕಣಿ, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಪಾಲ್ಗೊಳ್ಳುವರು. ಗಂಗಾಧರ ಕೊಳಗಿಯವರ ಮಿಸ್ಡಕಾಲ್ ಕೃತಿಯನ್ನು ಶ್ರೀಮತಿ ರೇಷ್ಮಾ ನಾಯ್ಕ, ಶ್ರೀಮತಿ ಸುಧಾ ಎಂ.ಅವರ ಅಪೂರ್ಣರಲ್ಲ ಕೃತಿಯನ್ನು ಲಕ್ಷ್ಮಣ ಬಡಿಗೇರ ಅವಲೋಕಿಸುವರು. ಕೃತಿಕಾರರಾದ ಗಂಗಾಧರ ಕೊಳಗಿ, ಸುಧಾ ಎಂ. ಉಪಸ್ಥಿತರಿರುವರು.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ಕವಿ ಕೆ.ಐ.ವೀರಲಿಂಗನಗೌಡ್ರು ಆಶಯ ನುಡಿಯನ್ನಾಡುವರು. ಕನ್ನೇಶ ಕೊಲಸಿರ್ಸಿ, ಕಾಳಿಪ್ರಸಾದ ನಾಯ್ಕ,ಸುಜಾತಾ ದಂಟಕಲ್, ನೂತನಾ ನಾಯ್ಕ,ಹನುಮಂತ ನಾಯ್ಕ, ಸುಧಾರಾಣಿ ನಾಯ್ಕ, ವಿಠ್ಠಲ ಅವರಗುಪ್ಪ, ಡಾ.ಚೈತ್ರಿಕಾ ಪಿ.ಹೊಸೂರ, ಮನೋಜಕುಮಾರ ಪಿ., ಯಶಸ್ವಿನಿಮೂರ್ತಿ, ಉಷಾ ಪ್ರಶಾಂತ ನಾಯ್ಕ ಪಾಲ್ಗೊಳ್ಳುವರು. ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸ್ಪಂದನ ಸೇವಾ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಎಸ್.ನಾಯ್ಕ ಕೋರಿದ್ದಾರೆ.