ಅಂಕೋಲಾ: ಬೇಲೆಕೇರಿಯ ತೋಟದಲ್ಲಿರುವ ಭರ್ಮಜಟಕ ಹಾಗೂ ಮಾಸ್ತಿ ದೇವರುಗಳ ವಾರ್ಷಿಕ ಉಪಹಾರ ಪೂಜೆಯ ನಿಮಿತ್ತವಾಗಿ ಅಂಕೋಲಾದ ಯುವ ಯಕ್ಷಗಾನ ಕಲಾವಿದರಿಂದ ‘ವೀರಮಣಿ ಕಾಳಗ’ ಎನ್ನುವ ಯಕ್ಷಗಾನ ಪ್ರದರ್ಶನಗೊಂಡು ಅಪಾರ ಜನಮನ್ನಣೆಗಳಿಸಿತು.
ತಾಲೂಕಿನ ಯುವ ಕಲಾವಿದರಾದ ವಿರೇಂದ್ರ ವಂದಿಗೆ, ಭರತ ಶೇಡಗೇರಿ, ಸುಜನ ನಾಯಕ ಅಗಸೂರು, ಗಣೇಶ ಕುದ್ರಿಗೆ, ಪನ್ನಗ ನಾಯಕ ಭಾವಿಕೇರಿ, ಸಂತೋಷ ಹೊಸಭಾಗ, ಅಕ್ಷಯ ನಾಯಕ ಭಾವಿಕೇರಿ ಮನೋಜ್ಞವಾಗಿ ಅಭಿನಯಿಸಿದರು. ರಮೇಶ ಗೌಡ ಕೋವೆ ಹಾಗೂ ಸಂಗಡಿಗರು ಹಿಮ್ಮೇಳವನ್ನು ನಿರ್ವಹಿಸಿದರು.
ಯಕ್ಷ ವೇದಿಕೆಯಲ್ಲಿ ಬಡಗೇರಿಯ ಯಕ್ಷಗಾನ ಹಾಗೂ ಜಾನಪದ ಕಲಾವಿದ ರಾಮಾ ಗಣಪತಿ ಗೌಡರನ್ನು ದಿ.ರಾಮಕೃಷ್ಣ ನಾಯಕ ಬಾಲನ್ ನೆನಪಿಗಾಗಿ ಸನ್ಮಾನಿಸಿದರು. ಸನ್ಮಾನಿತರು ಮಾತನಾಡುತ್ತ ಎಲೆಮರೆಯ ಕಾಯಿಯಂತಿರುವ ನನ್ನಂಥವರನ್ನು ಸನ್ಮಾನಿಸಿ ಗೌರವಿಸಿರುವುದು ಅವಿಸ್ಮರಣೀಯ ಕ್ಷಣ ಎಂದರು.
ಕೆ.ಆರ್.ನಾಯಕ ಬೇಲೆಕೇರಿ ಅಧ್ಯಕ್ಷತೆಯನ್ನು ವಹಿಸಿದರು. ಪ್ರಮುಖ ಸಂಘಟಕರಾದ ಜ್ಞಾನದೇವ ಆರ್.ನಾಯಕ ಸ್ವಾಗತಿಸಿದರು. ಪ್ರಾಂಶುಪಾಲರಾದ ಎನ್.ಆರ್.ನಾಯಕ ನಿರ್ವಹಿಸಿದರು. ದಯಾನಂದ ಆರ್.ನಾಯಕ ವಂದಿಸಿದರು. ವೇದಿಕೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ಸಿ.ಎನ್.ನಾಯಕ, ಮಾಜಿ ತಾ.ಪಂ. ಸದಸ್ಯರಾದ ಹಮ್ಮಣ್ಣ ಕೆ.ನಾಯಕ, ಹಿರಿಯ ಯಕ್ಷಗಾನ ಹಾಸ್ಯ ಕಲಾವಿದರಾದ ನಾರಾಯಣ ನಾಯ್ಕ ಭಾವಿಕೇರಿ ಉಪಸ್ಥಿತರಿದ್ದರು.
ಅಶ್ರುತರ್ಪಣ
ಯಕ್ಷಗಾನದ ತೆಂಕುತಿಟ್ಟಿನ ಹೆಸರಾಂತ ಭಾಗವತರಾದ ಬಲಿಪ ನಾರಾಯಣ ಭಾಗವತರು ವಿಧಿವಶರಾದುದರಿಂದ ಬೇಲೆಕೇರಿಯ ತೋಟದ ಯಕ್ಷವೇದಿಕೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಯಕ್ಷಗಾನದ ಹಿರಿಯ ಕಲಾವಿದರಾದ ನಾರಾಯಣ ನಾಯ್ಕ ಭಾವಿಕೇರಿ, ಹೆಸರಾಂತ ಕಲಾವಿದರಾದ ರಾಜೇಶ ಮಾಸ್ತರ, ಹಿಮ್ಮೇಳದ ಭಾಗವತರಾದ ಕೋವೆ ರಮೇಶ ಗೌಡ, ಗಣಪತಿ ಗೌಡ, ಸುರೇಶ ಗೌಡ, ಬಡಗೇರಿಯ ರಾಮಾ ಗಣಪತಿ ಗೌಡ, ಚಂದು ನಾಯ್ಕ ಅಂಕೋಲಾ, ರವಿ ನಾಯಕ ಅಗಸೂರು, ಯಕ್ಷಗಾನ ಸಂಘಟಕರಾದ ಕೆ.ಆರ್. ನಾಯಕ ಬೇಲೆಕೇರಿ, ಜ್ಞಾನದೇವ ನಾಯಕ, ದಯಾನಂದ ನಾಯಕ, ಪಾಂಡು ಗೌಡ, ಮಹಾದೇವ ಆಗೇರ, ಶಿವಾ ಕೋಮಾರ ಉಪಸ್ಥಿತರಿದ್ದರು.