ಶಿರಸಿ: ಆರ್ಯ ಈಡಿಗ,ಬಿಲ್ಲವ ಹಾಗೂ ನಾಮಧಾರಿ ಯುವಕ ಸಂಘದಿಂದ ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 18 ಮತ್ತು 19 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಮಧುಕರ ಬಿಲ್ಲವ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಸಮುದಾಯದವರನ್ನು ಒಗ್ಗೂಡಿಸುವ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಸಹಾಯ ಮಾಡುವ ಮೂಲಕ ಶಿಕ್ಷಣ,ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಐಪಿಎಲ್ ಮಾದರಿಯ ಹಾರ್ಡ್ ಟೆನಿಸ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಮಾರ್ಚ್ 18 ಮತ್ತು 19ರಂದು ಎರಡು ದಿನಗಳ ಕಾಲ ಶಿರಸಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದರು.
ಸಂಘದ ಪ್ರಮುಖ ರಾಘವೇಂದ್ರ ನಾಯ್ಕ ಮಾತನಾಡಿ ಜಿಲ್ಲೆಯಲ್ಲಿರುವ ಸಮುದಾಯದ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ 8 ಟೀಮ್ ಗಳ ಲೀಗ್ ಮ್ಯಾಚ್ ಆಡಿಸಲಾಗುವುದು.ಪ್ರಥಮ ಬಹುಮಾನ 100000/- ರೂ,ದ್ವಿತೀಯ 50000/- ರೂ,ಹಾಗೂ ತೃತೀಯ 20000/-ರೂ. ಮತ್ತು ಆಕರ್ಷಕ ಪಾರಿತೋಷಕ ನೀಡಲಾಗುವುದು.
ಮಾರ್ಚ್ 6 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಶಿರಸಿ ಸುಪ್ರೀಯಾ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಸಮಾಜ ಬಾಂದವರಿಗೆ ಮಾತ್ರ ತಂಡ ಖರೀದಿ ಮಾಡಲು ಅವಕಾಶವಿದ್ದು
ಜಿಲ್ಲೆಯ ಸಮುದಾಯದ ಗಣ್ಯರು,ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.
ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಸಂಘದ ಪ್ರಮುಖರಾದ ಮಂಜುನಾಥ ಎಕ್ಕಂಬಿ,ನಾಗರಾಜ ನಾಯ್ಕ,ವಿವೇಕ ಪೂಜಾರಿ ಉಪಸ್ಥಿತರಿದ್ದರು.