Slide
Slide
Slide
previous arrow
next arrow

ಕ್ರಿಶ್ಚಿಯನ್ ಧರ್ಮ‌ ತೊರೆದು ಹಿಂದೂ ಧರ್ಮಕ್ಕೆ ಮರಳಿದ ಆದಿವಾಸಿಗಳು

300x250 AD

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮನವಿಯ ನಂತರ ಅಸ್ಸಾಂನಲ್ಲಿ 100 ಆದಿವಾಸಿಗಳು ಕ್ರಿಶ್ಚಿಯನ್ ಮತವನ್ನು ತ್ಯಜಿಸಿ ಮರಳಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.

ಫೆಬ್ರವರಿ 27 ಸೋಮವಾರದಂದು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡಿದ್ದ ನೂರಾರು ಜನರು ಹಿಂದೂ ಧರ್ಮವನ್ನು ಸ್ವೀಕರಿಸಿದರು ಎಂದು ವರದಿಗಳು ತಿಳಿಸಿವೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ತಿವಾ ಸಮುದಾಯಕ್ಕೆ ತಮ್ಮ ಗುರುತು ಮತ್ತು ಸಂಸ್ಕೃತಿಯ ಬೇರಿನೊಂದಿಗೆ ಬೆಸೆದುಕೊಂಡಿರುವಂತೆ ಮತ್ತು ಮತಾಂತರಗಳಿಂದ ದೂರವಿರುವಂತೆ ಮನವಿ ಮಾಡಿದ ವಾರಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಗೋಬಾ ದೇವರಾಜ ರಾಜ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜುರ್ ಸಿಂಗ್ ಬೊರೊಡೊಲೈ ಅವರು ನಡೆಸಿದ  ಸುಮಾರು 11 ಕ್ರಿಶ್ಚಿಯನ್ ತಿವಾ ಕುಟುಂಬಗಳ 43 ಸದಸ್ಯರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.

300x250 AD

ಅಲ್ಲದೇ ಅಸ್ಸಾಂನ ಜಾಗಿರೋಡ್‌ನಲ್ಲಿ 100 ಕ್ಕೂ ಹೆಚ್ಚು ಜನರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಜಾಗಿರೋಡ್ ಪ್ರದೇಶದಲ್ಲಿ “ಭಾಷಾ ಸಂಸ್ಕೃತಿ ಅರು ಉದ್ಯೋಗ ಪರ್ವ್” ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ನಡೆಸಲಾಯಿತು. ಗೋವಾ (ತಿವಾ) ರಾಜನ ಆಸ್ಥಾನದಲ್ಲಿ ಆಚರಿಸಲಾದ ಸಾಂಪ್ರದಾಯಿಕ ಸಮಾರಂಭದಲ್ಲಿ ಕ್ರಿಶ್ಚಿಯನ್ ಕುಟುಂಬಗಳು ಹಿಂದೂ ಧರ್ಮವನ್ನು ಸ್ವೀಕರಿಸಿದವು. ಅಲ್ಲದೇ ಮತ್ತೆ ಕ್ರಿಶ್ಚಿಯನ್‌ ಮತಕ್ಕೆ ಮತಾಂತರವಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿವೆ.

ಕೃಪೆ: http://news13.in

Share This
300x250 AD
300x250 AD
300x250 AD
Back to top