ನವದೆಹಲಿ: ದಿಬ್ರುಗಢದಲ್ಲಿ ಗಂಗಾ ವಿಲಾಸ್ ರಿವರ್ ಕ್ರೂಸ್ ತನ್ನ ಮೊದಲ ಪ್ರಯಾಣವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಂಪುಟ ಸಚಿವ ಸರ್ಬಾನಂದ ಸೋನಾವಾಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಮೋದಿ, “ವಿಶೇಷ ಪ್ರಯಾಣವು ಪೂರ್ಣಗೊಂಡಿದೆ! ಭಾರತ ಮತ್ತು ಸಾಗರೋತ್ತರದಿಂದ ಹೆಚ್ಚಿನ ಪ್ರವಾಸಿಗರು ಗಂಗಾ ವಿಲಾಸ್ ವಿಹಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಸೋನಾವಾಲ್ ಅವರು ಟ್ವಿಟ್‌ನಲ್ಲಿ, “ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ MV ಗಂಗಾವಿಲಾಸ್ ದಿಬ್ರುಗಢದಲ್ಲಿ ತನ್ನ ಮೊದಲ ಪ್ರಯಾಣವನ್ನು ಪೂರ್ಣಗೊಳಿಸಿದ್ದು ನಮಗೆಲ್ಲರಿಗೂ ಒಂದು ಐತಿಹಾಸಿಕ ಕ್ಷಣ. 3200 ಕಿಮೀ ಮತ್ತು 27 ನದಿ ವ್ಯವಸ್ಥೆಗಳನ್ನು ಒಳಗೊಂಡ ಈ ಕ್ರೂಸ್ ಪ್ರಯಾಣ ಪವಿತ್ರ ವಾರಣಾಸಿಯಿಂದ ಆರಂಭಗೊಂಡು ಬಾಂಗ್ಲಾದೇಶದ ಮೂಲಕ ಹಾದು ಅಸ್ಸಾಂ ತಲುಪಿ ಪ್ರಯಾಣ ಬೆಳೆಸಿತು” ಎಂದಿದ್ದಾರೆ.