Slide
Slide
Slide
previous arrow
next arrow

ಶಿರವಾಡದ ಅತಿಕ್ರಮಣದಾರರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ: ಮನವಿ ಸಲ್ಲಿಕೆ

300x250 AD

ಕಾರವಾರ: ಶಿರವಾಡದ ನಿರಾಶ್ರಿತರ ಜಾಗದಲ್ಲಿ ವಾಸಿಸುತ್ತಿರುವ ಅತಿಕ್ರಮಣದಾರರಿಗೆ ಹಾಗೂ ಅರಣ್ಯ ಭೂಮಿ ಅತಿಕ್ರಮಣ ಮಾಡಿ ಜೀವಿಸುತ್ತಿದ್ದವರಿಗೆ ಪುನರ್ವಸತಿ ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಕಡೆಯಲ್ಲಿ ಜಾಗ ಮೀಸಲಿಡಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಒತ್ತಾಯಿಸಿದ್ದಾರೆ.
ಶಿರವಾಡದ ಅತಿಕ್ರಮಣ ಜಾಗವನ್ನು ಸಕ್ರಮ ಮಾಡಬೇಕು ಎಂದು ಒತ್ತಾಯಿಸಿ ಸಾಕಷ್ಟು ಹೋರಾಟ, ಮನವಿ ಸಲ್ಲಿಕೆ ಮಾಡಲಾಗಿದೆ. ಆದರೆ ನ್ಯಾಯ ಈವರೆಗೆ ಲಭಿಸಿಲ್ಲ. ಕಳೆದ 35 ರಿಂದ 40 ವರ್ಷಗಳಿಂದ ಶಿರವಾಡ ವ್ಯಾಪ್ತಿಯ ನಿರಾಶ್ರಿತರ ಹಾಗೂ ಅರಣ್ಯ ಭೂಮಿಯಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದೆ. ಶಿರವಾಡದ ಅರಣ್ಯ ಭೂಮಿಯಲ್ಲಿ ಈಗ ವಾಸಗಾಗಿರುವ ಜನರನ್ನು ಇದು ಕೇಂದ್ರ ಸರಕಾರದ ರೈಲ್ವೆಗೆ ಮೀಸಲಿಟ್ಟಿರುವ ಜಾಗ ಎಂದು ನಿವಾಸಿಗಳನ್ನು ಕೂಡ ಎಬ್ಬಿಸಿದರೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳು ಸಹ ನಿರಾಶ್ರಿತರಾಗುವ ಭೀತಿ ಎದುರಾಗಿದೆ. ಆದ್ದರಿಂದ ಶಿರವಾಡದ ನಿರಾಶ್ರಿತ ಜಾಗದಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪ್ರತ್ಯೇಕ ಪುನರ್ವಸತಿ ಯೋಜನೆ ಅಡಿಯಲ್ಲಿ ಯಾವುದಾರೂ ಬೇರೆ ಪ್ರದೇಶದಲ್ಲಿ ಜಾಗ ಮಂಜೂರಿ ಮಾಡಿ, ಶಿರವಾಡದ ಅತಿಕ್ರಮಣದಾರರಿಗೆ ಜಾಗ ಮೀಸಲಿಡಬೇಕು ಎಂದು ಒತ್ತಾಯ ಮಾಡಲಾಗಿದೆ.
ಈ ಸಮಸ್ಯೆಯ ಬಗ್ಗೆ ಕಳೆದ ಜ.12ರಂದು ಶಿರವಾಡದ ಅತಿಕ್ರಮಣದಾರರ ಕುಟುಂಬದವರು ಪಾದಯಾತ್ರೆ ಮೂಲಕ ಬಂದು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಮಾಡಲಾಗಿದೆ. ಬಳಿಕ ಜ.19ರಂದು ಜಿಲ್ಲಾ ಉಸ್ತುವಾರಿ ಸಚಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕಿ ರೂಪಾಲಿ ನಾಯ್ಕ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಈ ವಿಷಯದ ಬಗ್ಗೆ ಜ.26ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸಹ ಕರೆಯಲಾಗಿತ್ತು ಎಂದು ಎಲಿಷಾ ತಿಳಿಸಿದ್ದಾರೆ. ಬಳಿಕ ಸಭೆಯಲ್ಲಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಜಾಗ ಮಂಜೂರಾತಿ ಕುರಿತು ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿ, ಕಾಲಾವಕಾಶ ಕೋರಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲು ತಹಸೀಲ್ದಾರರಿಗೆ ತಿಳಿಸಲಾಗಿತ್ತು. ಬಳಿಕ ತಹಸೀಲ್ದಾರ್ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಹಸೀಲ್ದಾರ್ ಅವರು ಸರ್ವೇ ಸಹ ಮಾಡಿದ್ದಾರೆ. ಆದ್ದರಿಂದ ಶಿರವಾಡದ ನಿರಾಶ್ರಿತರ ಜಾಗದಲ್ಲಿ ವಾಸಿಸುತ್ತಿರುವ ಕುಟುಂಬದ ಜೊತೆಗೆ ಅರಣ್ಯ ಭೂಮಿಯಲ್ಲೂ ವಾಸಿಸುತ್ತಿರುವ ಕುಟುಂಬಗಳನ್ನು ಸೇರಿಸಿ ಪ್ರತ್ಯೇಕ ಪುನರ್ವಸತಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯ ಮಾಡಲಾಗಿದೆ. ಈ ಸಂದರ್ಭದಲ್ಲಿ ಅತಿಕ್ರಮಣ ಜಾಗದಲ್ಲಿ ಜೀವಿಸುತ್ತಿರುವ ಜನರು ಇದ್ದರು.

300x250 AD
Share This
300x250 AD
300x250 AD
300x250 AD
Back to top