Slide
Slide
Slide
previous arrow
next arrow

‘ಯಡಳ್ಳಿ ಕಾಲೇಜು ಓದಿನ ಜೊತೆ ಬದುಕಿನ ಪಾಠವನ್ನೂ ಕಲಿಸಿದೆ’

300x250 AD

ಶಿರಸಿ: ಓದಿನ ಜೊತೆ ಬದುಕಿನ ಅನೇಕ ಪಾಠಗಳನ್ನೂ ಯಡಹಳ್ಳಿಯ ವಿದ್ಯೋದಯ ಕಾಲೇಜು ಕಲಿಸಿಕೊಟ್ಟಿದೆ ಎಂದು ಕಾಲೇಜಿನ ಅನೇಕ ವಿದ್ಯಾರ್ಥಿಗಳು ಗದ್ಗದಿತರಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಫೆ.24, ಶುಕ್ರವಾರ ಯಡಹಳ್ಳಿಯ ವಿದ್ಯೋದಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ದ್ವಿತೀಯ ಪಿಯುಸಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ವಿದ್ಯಾರ್ಥಿಗಳು, ಎಷ್ಟೋ ಜನ ಮಂಗಳೂರಿಗೆ ಹೋಗು, ಮೂಡಬಿದ್ರೆಗೆ ಹೋಗು, ಪೇಟೆ ಕಾಲೇಜಿಗೆ ಹೋಗು ಎನ್ನುತ್ತಿದ್ದರು. ಆದರೆ, ಅದನ್ನು ಬಿಟ್ಟು ಯಡಹಳ್ಳಿಗೆ ಬಂದಿದ್ದು ಸಾರ್ಥಕವಾಗಿದೆ. ಕಾಲೇಜಿನ ವಾತಾವರಣ, ಶಿಕ್ಷಕರ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ. ಗ್ರುಪ್ ಸ್ಟಡಿಯಿಂದ ಹಿಡಿದು ಅನೇಕ ಮೌಲ್ಯಯುತ ನಡೆ ನಮ್ಮ ಏಳ್ಗೆಗೆ ಕಾರಣವಾಗುತ್ತಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ‍್ಯ ಡಾ. ಆರ್.ಟಿ.ಭಟ್ಟ ವಹಿಸಿದ್ದರು. ವೇದಿಕೆಯಲ್ಲಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶ್ರೀಧರ ಹೆಗಡೆ ಮಶೀಗದ್ದೆ, ನಿರ್ದೇಶಕ ಎಸ್.ಕೆ.ಭಾಗವತ್, ಪ್ರಾಧ್ಯಾಪಕ ಎಸ್.ಜಿ.ಭಟ್ಟ, ರಾಜೀವ ಹೆಗಡೆ, ಪ್ರಮೋದ ಬಾಸಗೋಡ, ಡಿ.ಎಚ್. ಕಟ್ಟಿಮನಿ, ಹರೀಶ ನಾಯಕ, ಕೆ.ಆರ್.ನಾಯಕ, ಪಿ.ವೈ.ಗಡದ, ಕಿರಣಕುಮಾರ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top