ಭಟ್ಕಳ: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಉತ್ತರಕನ್ನಡ ಜಿಲ್ಲೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಡಾ.ಜಹೀರ್ ಕೋಲಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಹೈಕೋರ್ಟ್ ವಕೀಲ ಮುಹಮ್ಮದ್ ಅಫಾಕ್ ಕೋಲಾ ಆಯ್ಕೆಯಾದರು.
ಸಾಮಾಜಿಕ ಸಂಘಟನೆ ಮಜ್ಲಿಸ್ ಇಸ್ಲಾಹ್ ವ ತಂಜಿಎo ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಚುನಾವಣಾ ಸಭೆಯು ಮೌಲಾನಾ ಮುಹಮ್ಮದ್ ಅಮೀನ್ ರುಕ್ನುದ್ದೀನ್ ನದ್ವಿ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಆರಂಭಗೊoಡಿತು.
ಎಪಿಸಿಆರ್ ರಾಜ್ಯ ಕಾರ್ಯಕಾರಿ ಸದಸ್ಯ ಇನಾಯತುಲ್ಲಾ ಗವಾಯಿ ಸ್ವಾಗತಿಸಿದರು, ಮೌಲವಿ ಜಿಯಾವುರ್ ರೆಹಮಾನ್ ರುಕ್ನುದ್ದೀನ್ ನದ್ವಿ ಎಪಿಸಿಆರ್ ಪರಿಚಯಿಸಿದರು. ತಂಜಿಎo ಸಂಸ್ಥೆಯ ಅಧ್ಯಕ್ಷರಾದ ಇನಾಯತುಲ್ಲಾ ಶಾಬಂದರಿ ಅವರು ಅಧ್ಯಕ್ಷತೆ ವಹಿಸಿ, ಎಪಿಸಿಆರ್ನ ಸೇವೆಯನ್ನು ಶ್ಲಾಘಿಸಿ ಈ ಸಮಿತಿಯು ಜಿಲ್ಲೆಯಲ್ಲಿ ಕ್ರಿಯಾಶೀಲವಾಗಲು ತಂಜಿಎo ಸಂಸ್ಥೆಯಿoದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅವರ ಭಾxಣದ ನಂತರ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು.
ಉಪಾಧ್ಯಕ್ಷರನ್ನಾಗಿ ಮುಹಮ್ಮದ್ ವಸೀಂ ಮುನ್ನಾ, ಉಪ ಕಾರ್ಯದರ್ಶಿಯನ್ನಾಗಿ ಮೌಲಾನಾ ಮುಹಮ್ಮದ್ ಅಮೀನ್ ರುಕ್ನುದ್ದೀನ್ ನದ್ವಿ, ಅಕೌಂಟೆoಟ್ ಅಬುಲ್ ಅಲಾ ಬರ್ಮಾವರ್, ಕೋಶಾಧಿಕಾರಿಯನ್ನಾಗಿ ಮುಹಮ್ಮದ್ ರಮೀಝ್ ಕೋಲಾ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮೌಲಾನಾ ಇರ್ಫಾನ್ ಎಸ್.ಎಂ.ನದ್ವಿ, ಜಾವೇದ್ ಹುಸೇನ್ ಅರ್ಮಾರ್, ಮುಹಮ್ಮದ್ ಸಾದಿಕ್ ಮಟ್ಟಾ, ಮುಹಮ್ಮದ್ ಫೈಝಾನ್, ಮುಹಮ್ಮದ್ ಶಮೂನ್ ಮತ್ತು ಮುಹಮ್ಮದ್ ಸಫ್ವಾನ್ ಇದ್ದರು.