ದಾಂಡೇಲಿ: ತಾಲ್ಲೂಕಿನ ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೇರವಾಡದಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ರೈತರ ಕಬ್ಬಿನ ಬೆಳೆ ನಾಶವಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೇರವಾಡದ ಅಶೋಕ್ ಮಿರಾಶಿ ಮತ್ತು ಪರಶುರಾಮ ಅರ್ಜುನ್ ಕದಂ ಅವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಅಶೋಕ್ ಮಿರಾಶಿಯವರ ಅಂದಾಜು 20 ಟನ್ ಆಗುವಷ್ಟು ಕಬ್ಬು ಮತ್ತು ಪರಶುರಾಮ ಅರ್ಜುನ್ ಕದಂ ಅವರ ಅಂದಾಜು 10 ಟನ್ ಆಗುವಷ್ಟು ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣವೇ ಸ್ಥಳೀಯರು ಬ್ಯಾರಲ್ ಮೂಲಕ ನೀರನ್ನು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಕಸ್ಮಿಕ ಅಗ್ನಿ ಅವಘಡ; ಕಬ್ಬಿನ ಬೆಳೆ ನಾಶ
