ಸಿದ್ದಾಪುರ: ಪ್ರತಿ ಏಳು ವರ್ಷಗಳಿಗೆ ಒಮ್ಮೆ ನಡೆಯುವ ತಾಲೂಕಿನ ಕೋಲಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆ. 21ರಿಂದ 28 ರವರಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ವಾಸುದೇವ ಎಸ್.ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ಸಮಯದಲ್ಲಿ ಪ್ರತಿದಿನ ಮುಂಜಾನೆ 8 ಗಂಟೆಯಿಂದ ಸಾಯಂಕಾಲ 9 ಗಂಟೆಯವರೆಗೆ ವಿಶೇಷ ಪೂಜೆ ನಡೆಯಲಿದೆ. ಶ್ರೀದೇವಿಗೆ ಹರಕೆ, ವಗೈರೆ ನೀಡುವವರು ಜಾತ್ರಾ ಸಮಯದಲ್ಲಿ ಒಪ್ಪಿಸಬಹಪದು. ಪ್ರತಿದಿನ ಸಾಯಂಕಾಲ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಜೂಜಾಟ, ಮಧ್ಯಪಾನ ನಿಷೇಧಿಸಲಾಗಿದೆ. ಸ್ವಚ್ಚತೆ ಹಾಗೂ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ.ಸುರಕ್ಷತೆಯ ಕಾರಣದಿಂದ ಸಿ.ಸಿ.ಟಿವಿಯ ಕಣ್ಣಗಾವಲೂ ಇರಲಿದೆ ಎಂದರು.
ಜಾತ್ರಾ ಕಮಿಟಿ ಗೌರವಾಧ್ಯಕ್ಷ ಸೋಮನಾಥ ಎಸ್ ಗೌಡರ, ಉಪಾಧ್ಯಕ್ಷ ರಾಮಚಂದ್ರ ಕೊಠಾರಿ, ಸಹ ಕಾರ್ಯದರ್ಶಿ ಮಧುಕರ ಎನ್ ನಾಯ್ಕ ಕೋರೆ, ರಾಮಕೃಷ್ಣ ಮಣೆಗಾರ, ಚಂದ್ರಶೇಖರ ಗೌಡರ, ಗೋಪಾಲ ಕೊಠಾರಿ, ನಾರಾಯಣ ನಾಯ್ಕ, ಗುರುವಯ್ಯ ಬಂಧಿಸರ, ಅಣ್ಣಪ್ಪ ದೊಡ್ಮನೆ, ಚಂದ್ರ ಹಾಸ ಎಮ್ ಸನ್ನು, ಮಂಜು ಮುತ್ತಿ, ಲೋಕೇಶ ಬಡಗಿ, ಬಂಗಾರ್ಯ ನಡವಿನಕೇರಿ, ನಾರಾಯಣ ಮೇಲಿನಕೇರಿ, ಗೋವಿಂದ ಕೋರೆ ಇದ್ದರು.
ಹಂಗಾಮಿ ಅಂಗಡಿ ಜಾಗ ಹರಾಜು
ಜಾತ್ರೆಯಲ್ಲಿ ಹಂಗಾಮಿ ಅಂಗಡಿ ಜಾಗ ಹರಾಜು ಫೆಬ್ರವರಿ 12 ರಂದು ಬೆಳಿಗ್ಗೆ 10-00 ಗಂಟೆಗೆ ನಡೆಸಲಾಗುವುದು. ಹರಾಜಿನ ಮೊತ್ತ ವನ್ನು ಅಂದೇ ಪಾವತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9663735978ಗೆ ಸಂಪರ್ಕಿಸಬಹುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ನಾಯ್ಕ ಸನ್ನು ತಿಳಿಸಿದ್ದಾರೆ.
ಪ್ರತಿದಿನ ಮನರಂಜನಾ ಕಾರ್ಯಕ್ರಮ
ಜಾತ್ರೆಯ ಅಂಗವಾಗಿ ಪ್ರತಿದಿನ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಫೆ.22 ರಂದು ಯಕ್ಷಗಾನ, 23 ರಂದು ಹಸವಂತೆ ಗ್ರಾಮದವರಿಂದ ನಾಟಕ, 24 ರಂದು ಕೋಲಸಿರ್ಸಿ ರಾಮೇಶ್ವರ ನಾಟ್ಯ ಸಂಘದವರಿಂದ ನಾಟಕ, 25ರಂದು ಭಟ್ಕಳ ಝೇಂಕಾರ ತಂಡದವರಿಂದ ರಸಮಂಜರಿ, 26 ರಂದು ಕೊಂಡ್ಲಿ ಗ್ರಾಮದವರಿಂದ ನಾಟಕ, 27 ರಂದು ಕೋಲಸಿರ್ಸಿ ರಾಮೇಶ್ವರ ನಾಟ್ಯ ಸಂಗದವರಿಂದ ನಾಟಕ ನಡೆಯಲಿದೆ ಎಂದು ಕೆ.ಆರ್.ನಾಯಕ (ಬಾಬು) ತಿಳಿಸಿದರು.