ಭಟ್ಕಳ: ತಾಲ್ಲೂಕಿನ ಮುಟ್ಟಳಿ ಗ್ರಾಮ ಪಂಚಾಯತ ವ್ಯಾಪ್ತಿಯ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿ ಇದ್ದ ವಸ್ತುಗಳನ್ನು ಕಳ್ಳತನ ಮಾಡಿ ಸಾಗಿಸುವಾಗ ಇಬ್ಬರು ಕಳ್ಳರು ಸ್ಥಳೀಯ ಜನರ ಕೈಯಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ನಶೆಯಲ್ಲಿದ್ದ ಇಬ್ಬರು ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಇರುವ ಮುಟ್ಟಳ್ಳಿ ಮತ್ತು ತಲಾನ ಗ್ರಾಮದ ಜನರು ಪೂಜಿಸುವ ಶಕ್ತಿ ದೇವತೆ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬೀಗವನ್ನು ಒಡೆದು ಒಳಗೆ ಹೋಗಿ ಪ್ರವೇಶಿಸಿ ದೇವಸ್ಥಾನದ ಹುಂಡಿಗಳನ್ನು ಒಡೆದಿದ್ದರು.
ಈ ವೇಳೆ ಹುಂಡಿಯಲ್ಲಿದ್ದ ಹಣ ಮತ್ತು ದೇವಸ್ಥಾನದ ಗಂಟೆಗಳು, ಕಾಲುದೀಪ ಮತ್ತು ದೇವರ ಹರಿವಾಣ, ಇನ್ನಿತರ ವಸ್ತುಗಳನ್ನು ಕಳುವು ಮಾಡಿ ಚೀಲಗಳಲ್ಲ ತುಂಬಿಕೊಂಡು ದೇವಸ್ಥಾನ ಪಕ್ಕದಲ್ಲಿ ಇದ್ದ ಮರದ ಕೆಳಗಡೆ ಅವಿತು ಕುಳಿತುಕೊಂಡಿದ್ದರು. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರು ತೋಟಕ್ಕೆ ನೀರು ಬಿಟ್ಟು ಅದೇ ದಾರಿಯಲ್ಲಿ ಮನೆಗೆ ಬೈಕ್ ಮೇಲೆ ಸಾಗುತ್ತಿದ್ದ ವೇಳೆ ಗಾಡಿ ಹೆಡ್ ಲೈಟ್ ಅವರ ಮುಖದ ಮೇಲೆ ಬಿಟ್ಟಿದ್ದರು.
ಈ ವೇಳೆ ಪಕ್ಕದಲ್ಲಿ ಗೋಣಿ ಚೀಲ ನೋಡಿದ್ದು ಅನುಮಾನಗೊಂಡು ವಿಚಾರಿಸಿದ್ದಾಗ ಕಳ್ಳರು ತಿಮ್ಮಪ್ಪ ನಾಯ್ಕನಿಗೆ ಹಲ್ಲೆಗೆ ಯತ್ನಿಸಿದ್ದು, ಅವರಿಂದ ತಪ್ಪಿಸಿಕೊಂಡು ಸ್ಥಳೀಯರಿಗೆ ಸುದ್ದಿ ತಿಳಿಸಿದ್ದಾರೆ. ಆರೋಪಿಗಾಳಾದ ಇರ್ಫಾನ್ ಅನ್ನರಸಾಬ್ ಹಾಗೂ ಆರೀಫ್ ಅನ್ನಾರ ಈ ಇಬ್ಬರು ಟಿಪ್ಪು ನಗರ ಶಿವಮೊಗ್ಗ ನಿವಾಸಿ ಆಗಿದ್ದು ಹಾಲಿ ಬೆಳಲಖಂಡದಲ್ಲಿ ವಾಸ್ತವವಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಆಗಮಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನ ಮಾಡಿದಾಗ ಕಳ್ಳರು ಬೈಕ್ ಸ್ಟಾರ್ಟ್ ಮಾಡಿ ಅವಸರದಲ್ಲಿ ಹೋಗುವಾಗ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಸಾರ್ವಜನಿಕರ ಕೈಗೆ ಸಿಲುಕಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 112 ಪೋಲಿಸ್ ವಾಹನ ಮತ್ತು ಗ್ರಾಮೀಣ ಠಾಣೆ ಪೋಲಿಸ್ ಆಗಮಿಸಿ ಕಳ್ಳರನ್ನು ವಶಕ್ಕೆ ಪಡೆದು ಕೊಂಡಿದ್ದು, ಈ ಬಗ್ಗೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಸಂತೋಷ ಗೊಯ್ದಪ್ಪ ನಾಯ್ಕ ದೂರು ನೀಡಿದ್ದು ಸಿ.ಪಿ.ಐ ಚಂದನ ಗೋಪಾಲ ಹಾಗೂ ಪಿ.ಎಸ್.ಐ ಶ್ರೀಧರ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.