ಶಿರಸಿ: ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಇದರ ಆಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಇದರ ಸಹಯೋಗದೊಂದಿಗೆ ಶಿಕ್ಷಕ,ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದಲ್ಲಿ ಯೋಗಶಿಕ್ಷಣ, ನೈತಿಕ ಶಿಕ್ಷಣ, ಹಾಗೂ ಸಹಾಯಕ ಶಿಕ್ಷಣ ತರಬೇತಿ ಶಿಬಿರವು ಫೆ. 06 ರಿಂದ ಪ್ರಾರಂಭವಾಗಿದ್ದು,ಫೆ.11 ರವರೆಗೆ ನಡೆಯಲಿದೆ. ಶಿಬಿರಾರ್ಥಿಗಳ ನೊಂದಣಿ ಕಾರ್ಯದ ನಂತರ 12 ಘಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಗೌರವರಕ್ಷೆ ಸ್ವೀಕಾರ ಹಾಗೂ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ಶಿಕ್ಷಣ ಸಂಯೋಜಕ ಎಂ.ಕೆ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಇಲಾಖೆಗೆ ಪೂರಕವಾದ ಚಟುವಟಿಕೆಗಳನ್ನು ನೀಡುವ ಸೇವಾದಳ ತರಬೇತಿ ಪಡೆದು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶಿಕ್ಷಕರು ಸಹಕರಿಸಬೇಕು ಎಂದರು. ಸಭೆಯ ಅಧ್ಯಕ್ಷ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಸ್.ನಾಯಕ್ ದೇಶಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ನೀಡುವ ಸೇವಾದಳ ಶಿಕ್ಷಣ ಮಕ್ಕಳಿಗೆ ತಲುಪಿಸುವ ಕೆಲಸ ನಮ್ಮಿಂದಾಗಬೇಕು. ನಾವು ಚೈತನ್ಯದ ಚಿಲುಮೆಯಂತಿದ್ದರೆ ಮಕ್ಕಳೂ ಕೂಡಾ ಚೈತನ್ಯದ ಚಿಲುಮೆಯಾಗಿ ಹೊಮ್ಮುತ್ತಾರೆ ಎಂದು ಹೇಳಿದರು.
ಬೆಳಿಗ್ಗೆ 9-00 ಘಂಟೆಗೆ ಸರಿಯಾಗಿ ರಾಯಪ್ಪ ಹುಲೇಕಲ್ ಶಾಲೆ ಧ್ವಜಕ್ಷೇತ್ರದಲ್ಲಿ ಧ್ವಜಾರೋಹಣದ ಮೂಲಕ ಪ್ರಾರಂಭಗೊಂಡಿತು. ಭಾರತ ಸೇವಾದಳ ತಾಲೂಕಾ ಸಮಿತಿ ಕೋಶಾಧ್ಯಕ್ಷ ಕುಮಾರ ಎಸ್. ನಾಯ್ಕ ಧ್ವಜವಂದನೆ ಸ್ವೀಕರಿಸಿ ಸೇವಾದಳ ತತ್ವ ಆದರ್ಶ ಮೈಗೂಡಿಸಿಕೊಂಡು ದೇಶವನ್ನು ಬಲಪಡಿಸುವಲ್ಲಿ ತಮ್ಮ ಅಳಿಲು ಸೇವೆಯನ್ನು ನೀಡಲು ಮುಂದಾಗಬೇಕು ಎಂಬ ಮಾತನ್ನು ಹೇಳಿದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸಹಕರಿಸಿದರು. ಸಭೆಯಲ್ಲಿ ಭಾರತ ಸೇವಾದಳ ತಾಲೂಕಾ ಸಮಿತಿ ಅಧ್ಯಕ್ಷ ಅಶೋಕ ಬಿ. ಭಜಂತ್ರಿ , ಜಿಲ್ಲಾ ಭಾರತ ಸೇವಾದಳ ಸಮಿತಿ ಕಾರ್ಯದರ್ಶಿ ಪ್ರೊ. ಕೆ.ಎನ್. ಹೊಸಮನಿ, ಭಾರತ ಸೇವಾದಳ ತಾಲೂಕಾ ಸಮಿತಿ ಸದಸ್ಯ ಕೆ.ಎನ್. ನಾಯ್ಕ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ, ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ(ಪ್ರಭಾರೆ) ಅಶೋಕ ತಾರೀಕೊಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಸುಧಾಮ ಪೈ, ಉದಯಕುಮಾರ ಎಸ್. ಹೆಗಡೆ, ಬಾಬು ನಾಯ್ಕ, ಶ್ರೀಮತಿ ಸಾವಿತ್ರಿ ಭಟ್ಟ, ಶ್ರೀಮತಿ ಪುಲ್ಲಾರ ಡಿಸೋಜಾ, ಸರ್ವೇಶ್ವರ ಎಂ. ಶೆಟ್ಟಿ, ಕಾರ್ಯ ನಿರ್ವಹಿಸಿದರು. ಎಂ.ಎನ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ , ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಆರು ತಾಲೂಕುಗಳಿಂದ 40 ಶಿಬಿರಾರ್ಥಿ ಶಿಕ್ಷಕರು ಹಾಜರಿದ್ದರು.ಸಿದ್ದಾಪುರ ತಾಲೂಕಾ ಸಂಘಟಕ ಬಾಬು ನಾಯ್ಕ ವಂದಿಸಿದರು.