ಯಲ್ಲಾಪುರ: ಇಡಗುಂದಿ ವಲಯದ ವಜ್ರಳ್ಳಿ ಶಾಖಾ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಡಿ.24ರ ನಸುಕಿನಲ್ಲಿ ಕಡವೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟ ಮಾಡಿದ ಇರ್ವರನ್ನು ಇಡಗುಂದಿ ಒಳ್ಳೆಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇತ್ತೀಚೆಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕಡವೆ ಭೇಟೆಯಾಡಿದ ಆರೋಪಿಗಳಾದ ವಜ್ರಳ್ಳಿ ಗ್ರಾಮದ ಜಿಕ್ರಿಯಾ ಉಮರಸಾಬ್ ಮುಲ್ಲಾ ಹಾಗೂ ಈರಾಪುರ ಬಾಳ್ನಿಮನೆ ಗ್ರಾಮದ ಗಜಾನನ ಮಹಾದೇವ ಪಟಗಾರ ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಪ್ರಕರಣದಲ್ಲಿ ಮತ್ತೊಬ್ಬ ಮುಖ್ಯ ಆರೋಪಿಯಾದ ಯಲ್ಲಾಪುರ ಪಟ್ಟಣದ ತಳ್ಳಿಕೇರಿಯ ತಿಮ್ಮಣ್ಣ ಗೌಡ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಆರೋಪಿತರ ವಿರುದ್ಧ ವನ್ಯಜೀವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಮಾರ್ಗದರ್ಶನದಲ್ಲಿ ನಡೆದ ದಾಳಿ ಸಂದರ್ಭದಲ್ಲಿ ಇಡಗುಂದಿ ವಲಯ ಅರಣ್ಯಾಧಿಕಾರಿಗಳಾದ ಶಿಲ್ಪಾ ಎಸ್ ನಾಯ್ಕರವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಎಚ್.ಸಿ.ಪ್ರಶಾಂತ್, ಶರಣಬಸವ ದೇವರ, ಸಂತೋಷ ಪವಾರ, ಗಂಗಾ, ಅಕ್ಷತಾ ಗಸ್ತು ಅರಣ್ಯ ಪಾಲಕರಾದ ಗೌಡಪ್ಪಗೌಡ ಸುಳ್ಳದ, ಕೆಂಚಪ್ಪ ಹಂಚಿನಾಳ್, ದತ್ತಾತ್ರೇಯ ತಳವಾರ, ಪ್ರಶಾಂತ ಮೆಹ್ತಾ, ಕಾಶಿನಾಥ ಯಂಕಂಚಿ ಚಂದ್ರಹಾಸ ಪಟಗಾರ, ನಾಮದೇವ ಲಮಾಣಿ, ಕ್ಷೇಮಾಭಿವೃದ್ಧಿ ನೌಕರ ಶಿವಣ್ಣಗೌಡ ಮತ್ತಿತರರು ಇದ್ದರು.