ಶಿರಸಿ: ಇಂದಿನ ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ಭಾಗದ ಸಾಂಸ್ಕೃತಿಕ ಕಲೆಗಳು ನಶಿಸುತ್ತಿದೆ. ನಮ್ಮ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಜನತೆಯ ಮೇಲಿದೆ ಎಂದು ವರದಿಗಾರ ರಾಜು ಕಾನಸೂರು ಹೇಳಿದರು.
ಅವರು ತಾಲೂಕಿನ ಬಿಸಲುಕೊಪ್ಪ ಉಲ್ಲಾಳದಲ್ಲಿ ಶ್ರೀ ಮಾರಿಕಾಂಬಾ ತರುಣ ನಾಟ್ಯ ಸಂಘ ಅವರ 24ನೇ ಕಲಾಕುಸುಮಾ ನಾಟಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವ ಜನತೆ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆಯುತ್ತಿದ್ದಾರೆ. ಟಿವಿ, ಮೊಬೈಲ್ ಹಾವಳಿಯಲ್ಲಿ ನಮ್ಮ ಜನಪದ ಕಲೆಗಳು ನಶಿಸುತ್ತಿವೆ. ಇಂತಹ ಕಲೆಗಳಿಗೆ ಪ್ರೋತ್ಸಾಹ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇವು ಸಹ ಪುಸ್ತಕದ ಪುಟಗಳಲ್ಲಿ ಸೇರಲಿವೆ ಎಂದು ಅವರು ಹೇಳಿದರು.
ಸಂಜೀವ ನಾಯ್ಕ ಮಾತನಾಡಿ ಕಳೆದ 24 ವರ್ಷಗಳಿಂದ ಉಲ್ಲಾಳದ ಯುವಕರು ಗ್ರಾಮೀಣ ರಂಗ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಶ್ಲಾಘನೀಯವಾಗಿದ್ದು, ಮುಂದಿನ ಪೀಳಿಗೆಯ ಯುವಕರಿಗೆ ಇದು ಮಾದರಿಯಾಗಿದೆ ಎಂದರು.
ಗಂಗಾಧರ ಹೆಗಡೆ ಉದ್ಘಾಟನಾ ಭಾಷಣ ಮಾಡಿದರು, ಮುಂದಿನ ಅತಿಥಿಗಳಾಗಿ ಆಗಮಿಸಿದ್ದ ತಿರುಮಲ ಭಟ್ಟ, ರಾಘವೇಂದ್ರ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಸುರೇಶ ನಾಯ್ಕ, ಗ್ರಾ.ಪಂ.ಅಧ್ಯಕ್ಷ ರಾಘು ನಾಯ್ಕ, ಗಂಗಾಧರ ಹೆಗಡೆ, ದೇವರಾಜ ನಾಯ್ಕ ತೊಗರವಳ್ಳಿ, ಸತೀಶ್ ನಾಯ್ಕ ತೊಗರಳ್ಳಿ,ರಾಮಚಂದ್ರ ಜೈನ್ ಅಟಬೈಲ್, ಶ್ರೀಕಾಂತ್ ಪೂಜಾರಿ ಉಲ್ಲಾಳ, ನಾಗರಾಜ ನಾಯ್ಕ ಜೊಡಿಕಟ್ಟಾ,ಪ್ರದೀಪ ನಾಯ್ಕ, ಶ್ರೀಧರ ನಾಯ್ಕ, ಪರಮೇಶ್ವರ ಶೆಟ್ಟಿ, ಎಲ್.ಜಿ.ಹೆಗಡೆ, ದೇವರಾಯ ನಾಯ್ಕ, ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಉಮೇಶ್ ಪೂಜಾರಿ, ಎಲ್.ಜಿ.ಹೆಗಡೆ ನಿರ್ವಹಿಸಿದರು. ಗಣೇಶ ಪೂಜಾರಿ ವಂದನಾರ್ಪಣೆ ಮಾಡಿದರು.
ಎಲ್ಲಾ ಕಲಾವಿದರ ಅಭಿನಯ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.