ಶಿರಸಿ: ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಒಕ್ಕಲಕೊಪ್ಪ ಗ್ರಾಮದ ಸುಪ್ರಸಿದ್ಧ ಹಾಗೂ ಹರಕೆಯ ಜಗದೀಶ್ವರ ಎಂದೇ ಪ್ರಖ್ಯಾತಿಗೊಂಡಿರುವ ಶ್ರೀ ಜಗದೀಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಒಕ್ಕಲಕೊಪ್ಪದ ಶ್ರೀ ದೇವರ ಸನ್ನಿಧಾನದಲ್ಲಿ ಜ.28 ಶನಿವಾರದಂದು 4ನೇ ವರ್ಷದ ವರ್ಧಂತಿ ಉತ್ಸವದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಪೂಜಾ ಸೇವೆ ಸಲ್ಲಿಸುವವರಿಗೆ ರುಧ್ರಾಭಿಷೇಕ ಮತ್ತು ರುದ್ರಹವನ ಸೇವೆ ಸಲ್ಲಿಸಬಹುದು. ಸಂಜೆ 8.00 ಗಂಟೆಗೆ ವಿಶೇಷ ದೀಪಾಲಂಕಾರ ಪೂಜೆ ಮತ್ತು ಮಂಗಳಾರತಿ ನಡೆಯುತ್ತದೆ. ಸದ್ಭಕ್ತ ಸರ್ವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. ರಾತ್ರಿ 9.30 ರಿಂದ ಶ್ರೀ ಜಗದೀಶ್ವರ ನಾಟ್ಯ ಕಲಾ ತಂಡದಿಂದ ‘ಮಾಂಗಲ್ಯ ಉಳಿಸಿದ ಮೈದುನ’ ಎಂಬ ಹಾಸ್ಯಮಯ ನಾಟಕವನ್ನು ಆಯೋಜಿಸಲಾಗಿದೆ.