ಶಿರಸಿ: ಇಲ್ಲಿಯ ಸರಕಾರಿ ಭೂಮಾಪನ ಅಧಿಕಾರಿಯೊಬ್ಬನ ಬೇಜವಾಬ್ದಾರಿತನದ ಕುರಿತಾಗಿ ಸೋಮವಾರ ಸಂಜೆ e – ಉತ್ತರ ಕನ್ನಡ ಡಿಜಿಟಲ್ ಮೀಡಿಯಾ ಬಿತ್ತರಿಸಿದ್ದ ವರದಿಗೆ ಶಿರಸಿ ಸಹಾಯಕ ಆಯುಕ್ತ ಆರ್. ದೇವರಾಜ್ ತುರ್ತು ಸ್ಪಂದಿಸಿದ್ದಾರೆ.
ಖಾದರ್ ಸಾಬ್ ಎನ್ನುವ ಅಧಿಕಾರಿಯೊಬ್ಬ ಜನಸಾಮಾನ್ಯರ ಕೆಲಸಕ್ಕೆ ತೊಡಕಾಗಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದರು. ಕಳೆದ ಹಲವಾರು ತಿಂಗಳುಗಳಿಂದ ಈತನ ಮೇಲೆ ಸಾಕಷ್ಟು ಬೇಜವಾಬ್ದಾರಿ ಆರೋಪಗಳು ಕೇಳಿಬಂದಿದ್ದವು.
ವರದಿ ಪ್ರಕಟಿಸಿ 15 ಗಂಟೆಯೊಳಗೆ ಎಸಿ ಕಛೇರಿಗೆ ಸರ್ವೇಯರ್ ಖಾದರ್ ಸಾಬ್ ಕರೆಯಿಸಿ ಕಾರಣ ಕೇಳಿ ಶೌಕಾಸ್ ನೋಟಿಸನ್ನು ಸಹಾಯಕ ಆಯುಕ್ತ ಆರ್. ದೇವರಾಜ್ ನೀಡಿದ್ದಾರೆ. ಮತ್ತು ಸ್ಥಳದಲ್ಲಿಯೇ ಬೇಜವಾಬ್ದಾರಿ ಸಾಬಿತಾದ ಹಿನ್ನಲೆಯಲ್ಲಿ ರೈತರ ಎದುರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ ಎನ್ನಲಾಗಿದೆ. ಹಾಗು ಎರಡು ತಿಂಗಳುಗಳಿಂದ ಇಲಾಖೆಗೆ ಅಲೆದಾಡುತ್ತಿದ್ದ ವೃದ್ಧರಿಗೆ 48 ಗಂಟೆಯೊಳಗೆ ಸರ್ವೇ ನಕಾಶೆ ನೀಡಲು ಎಸಿ ದೇವರಾಜ್ ಸೂಚನೆ ನೀಡಿದ್ದಾರೆ.