Slide
Slide
Slide
previous arrow
next arrow

ರಕ್ತದಾನ, ನೇತ್ರದಾನ ಜಾಗೃತಿ ಅಭಿಯಾನ ದಾಸೋಹ ಯಶಸ್ವಿ

300x250 AD

ಶಿರಸಿ: ನಗರದ ಶ್ರೀ ರುದ್ರದೇವರ ಮಠದಲ್ಲಿ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಸೇವಾ ಸಮಿತಿ (ರಿ.) ಶಿರಸಿ, ಇವರ ನೇತೃತ್ವದಲ್ಲಿ ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ತ್ರಿವಿಧ ದಾಸೋಹಿ ವಿಶ್ವರತ್ನ ಶತಾಯುಷಿ ಶ್ರೀ ಡಾ. ಶ್ರೀ ಶಿವಕುಮಾರ ಮಹಾಯೋಗಿಗಳ ನಾಲ್ಕನೇ ಪುಣ್ಯಸ್ಮರಣೆಯ ಪ್ರಯುಕ್ತ “ರಕ್ತದಾನ, ನೇತ್ರದಾನ ಜಾಗೃತಿ ಅಭಿಯಾನ ದಾಸೋಹ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪಿಎಸ್ಐ ರಾಜಕುಮಾರ ಎಸ್. ಉಕ್ಕಲೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಶಿವಕುಮಾರ ಸ್ವಾಮಿಗಳು ಒಂದು ಆದರ್ಶ ವ್ಯಕ್ತಿತ್ವದ ದೇವರ ಸ್ವರೂಪ. ನಮಗೆಲ್ಲ ಪ್ರೇರಣೆ. ಹಾಗೆ ಇನ್ನೊಬ್ಬ ದೇವರನ್ನು ಕೂಡ ಇತ್ತಿತ್ತಲಾಗಿ ಕಳೆದುಕೊಂಡೆವು ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಕೂಡ ನೆನೆದು ಅವರು ಹಾಕಿಕೊಟ್ಟಂತ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸುವಂತವರಾಗಬೇಕು ಎಂದು ಅವರು ಕೂಡ ಸ್ವತಃ ರಕ್ತದಾನ ಮಾಡಿ ಮಾದರಿಯಾದರು. ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ, ಸಮಾಜ ಸೇವಕ ಗಜಾನನ ಗೌಡ್ರು ಬಾಸಿ ಕೂಡ ಸಮಿತಿಯ ಕೆಲಸವನ್ನು ಮೆಚ್ಚಿ ಸಹಕಾರ ನೀಡಿ ಅವರು ರಕ್ತದಾನ ಮಾಡುವಲ್ಲಿ ಮಾದರಿಯಾಗಿ ನಿಂತರು. ಶ್ರೀಮತಿ ಪ್ಲೇವಿಯಾ ಜಗದೀಶ್ ಮಹಿಳಾ ಸಾಂತ್ವಾನ ವೇದಿಕೆ ಕಾನೂನು ಸಲಹೆಗಾರರು, ಸಮಾಜದಲ್ಲಿ ಮಹಿಳೆಯರಿಗೆ ಕಾನೂನು ಹಾಗೂ ಸಾಂತ್ವನ ವೇದಿಕೆಯು ರಕ್ಷಣೆ ಬಗ್ಗೆ ಮಾತನಾಡಿದರು. ಖ್ಯಾತ ನೇತ್ರತಜ್ಞ ಡಾ.ಶಿವರಾಮ ಕೆ.ವಿ. ನೇತ್ರದಾನದ ಮಹತ್ವ ಹಾಗೂ ಅದನ್ನು ಕೊಡುವ ಕ್ರಮವನ್ನು ಕೂಡ ವಿವರಿಸಿ ಜನರಿಗೆ ಜಾಗೃತಿ ಮೂಡಿಸಿದರೆ, ಡಾ. ಸುಮನ್ ಹೆಗಡೆ, ರಕ್ತದಾನದ ಮಹತ್ವದ ಬಗ್ಗೆ ತಿಳಿ ಹೇಳಿದರು ಮತ್ತು ಗ್ರೀನ್ ಕೇರ್ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ತೋನ್ಸೆ ಕೂಡ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಂತ ಮುಖ್ಯವಾದವುಗಳು ಮತ್ತು ಸಮಾಜ ಸೇವೆಯಲ್ಲಿ ಆರೋಗ್ಯ ಮತ್ತು ಜಾಗೃತಿ ಅಭಿಯಾನಗಳ ಆರೋಗ್ಯ ಮತ್ತು ಜಾಗೃತಿ ಅಭಿಯಾನಗಳ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಯಬೇಕು. ಅದಕ್ಕಾಗಿ ನಮ್ಮ ಸಹಕಾರವೂ ಇದೆ ಎಂದು ಹೇಳಿದರು. ಕೊನೆಯಲ್ಲಿ ಶ್ರೀ.ಮ.ನಿ ಪ್ರ ಮಲ್ಲಿಕಾರ್ಜುನ ಸ್ವಾಮಿಗಳು ರುದ್ರ ದೇವರಮಠ ಆಶೀರ್ವಚನ ನೀಡಿ ರಕ್ತದಾನ ಮತ್ತು ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿದರು.

300x250 AD

ಕಾರ್ಯಕ್ರಮದ ನಿರೂಪಣೆಯನ್ನು ಗಜಾನನ ಡಿ ನಾಯ್ಕ್ ಮಾಡಿದರೆ, ಜ್ಯೋತಿ ಮುಕ್ತೇಶ್ ಗೌಡ ಪಾಟೀಲ್ ಸ್ವಾಗತಿಸಿದರು. ವಂದನಾರ್ಪಣೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ್ ವಿ. ಮೈಸೂರ್, ಮತ್ತು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಸುಮಾರು 25 ಜನ ರಕ್ತದಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು. ಕೊನೆಯಲ್ಲಿ ಅನ್ನ ಸಂತರ್ಪಣೆ ಪ್ರಸಾದ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top